ನವದೆಹಲಿ: ಭಾರತದಲ್ಲಿ ‘ಉದ್ಯೋಗಕ್ಕೆಆದ್ಯತೆಯಲ್ಲಿರುವ ಕಂಪನಿಗಳು’ ಪಟ್ಟಿಯಲ್ಲಿ ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ ಮೊದಲ ಸ್ಥಾನದಲ್ಲಿದೆ. ಅಮೆಜಾನ್ ಮತ್ತು ಓಯೊ ಕ್ರಮವಾಗಿಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

ಸಾಮಾಜಿಕ ಜಾಲತಾಣ ಲಿಂಕ್ಡ್ಇನ್ ನಡೆಸಿರುವ ‘2019 ಟಾಪ್ ಕಂಪನಿಗಳು’ ಸಮೀಕ್ಷೆಯಿಂದ ಈ ವಿಷಯ ತಿಳಿದುಬಂದಿದೆ.

ಪಟ್ಟಿಯಲ್ಲಿರುವಬಹುತೇಕ ಕಂಪನಿಗಳು ಎಂಜಿನಿಯರಿಂಗ್, ಕಾರ್ಯ
ನಿರ್ವಹಣೆ ಹಾಗೂ ಔದ್ಯಮಿಕ ಅಭಿವೃದ್ಧಿ ವಿಭಾಗಗಳಿಗೆ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ. ಪಟ್ಟಿಯಲ್ಲಿರುವ ಇತರೆ ಕಂಪನಿಗಳಲ್ಲಿ ಐಬಿಎಂ (15), ಓಲಾ (19), ಐಸಿಐಸಿಐ ಬ್ಯಾಂಕ್ (20), ಲಾರ್ಸೆನ್ ಆ್ಯಂಡ್ ಟರ್ಬೊ (23), ಒರಾಕ್ಯಲ್ (24) ಸೇರಿವೆ ಎಂದು ವರದಿ ತಿಳಿಸಿದೆ.

ಆಯ್ಕೆಯ ಮಾನದಂಡ

ಕಂಪನಿ ಕುರಿತ ಆಸಕ್ತಿ, ಉದ್ಯೋಗಿಗಳ ಜತೆ ಕಂಪನಿ ನಡೆದುಕೊಳ್ಳುವ ರೀತಿ, ಉದ್ಯೋಗ ಬೇಡಿಕೆ ಮತ್ತು ಉದ್ಯೋಗಿಗಳನ್ನು ತಮ್ಮ ಸಂಸ್ಥೆಯಲ್ಲಿಯೇ ಉಳಿಸಿಕೊಳ್ಳುವ ಕಂಪನಿಯ ಸಾಮರ್ಥ್ಯ ಈ ನಾಲ್ಕು ಅಂಶಗಳನ್ನು ಮಾನದಂಡವಾಗಿ ಇರಿಸಿ ರ್ಯಾಂಕಿಂಗ್ ಸಿದ್ಧಪಡಿಸಲಾಗಿದೆ.

ಈ ವರ್ಷದ ಪಟ್ಟಿಯಲ್ಲಿರುವ ಕಂಪನಿಗಳಲ್ಲಿ ಟಿಸಿಎಸ್, ಐಬಿಎಂ ಸೇರಿದಂತೆ ಅರ್ಧದಷ್ಟು ಕಂಪನಿಗಳು ಹೊಸದಾಗಿ ಸೇರ್ಪಡೆಯಾಗಿವೆ. ಉದ್ಯೋಗ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆ ಬದಲಾಗುತ್ತಿರುವುದಕ್ಕೆ ಇದು ಸಾಕ್ಷಿ
–ಅದಿತ್ ಚಾರ್ಲಿ, ಲಿಂಕ್ಡ್ಇನ್ ಭಾರತೀಯ ಮಾರುಕಟ್ಟೆ ನಿರ್ವಹಣಾ ಸಂಪಾದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.