ನವದೆಹಲಿ: ವಂಚನೆ ಪತ್ತೆ ವ್ಯವಸ್ಥೆಯ ಅಳವಡಿಕೆಯಿಂದಾಗಿ ಪ್ರತಿದಿನ 1.35 ಕೋಟಿ ವಂಚನೆ ಕರೆಗಳಿಗೆ ತಡೆ ಬಿದ್ದಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ಗ್ರಾಹಕರಿಗೆ ಮೋಸ ಮಾಡುವ ಉದ್ದೇಶದಿಂದ ವಿದೇಶಗಳಿಂದ ಹೆಚ್ಚಾಗಿ ಅನಪೇಕ್ಷಿತ ಮೊಬೈಲ್ ಕರೆಗಳು ಬರುತ್ತವೆ. ಇಂತಹ ಸ್ಪ್ಯಾಮ್ಗಳನ್ನು ಪತ್ತೆಹಚ್ಚಿ ತಡೆಗಟ್ಟಲಾಗುತ್ತಿದೆ. ಇದರಿಂದ ಇಲ್ಲಿಯವರೆಗೆ ಸಾರ್ವಜನಿಕರಿಗೆ ಆಗುತ್ತಿದ್ದ ₹ 2,500 ಕೋಟಿ ನಷ್ಟವನ್ನು ತಪ್ಪಿಸಲಾಗಿದೆ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಟೆಲಿಕಾಂ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ‘ಸಂಚಾರ ಸಾಥಿ’ ಪೋರ್ಟಲ್ ಅನ್ನು ರೂಪಿಸಲಾಗಿದೆ. ಇದು ಮೊಬೈಲ್ ಕಳ್ಳತನ ಪ್ರಕರಣ ಪತ್ತೆ ಹಚ್ಚಲು ನೆರವಾಗಿದೆ. ಅಲ್ಲದೆ, ‘ಚಕ್ಷು’ ಪೋರ್ಟಲ್ ವಂಚನೆ ಕರೆಗಳು ಮತ್ತು ಸಂದೇಶದ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದ್ದಾರೆ.

ವಂಚನೆ ಪತ್ತೆ ವ್ಯವಸ್ಥೆಯು 2.9 ಲಕ್ಷ ಮೊಬೈಲ್ ಫೋನ್ಗಳ ಸಂಪರ್ಕ ಮತ್ತು 18 ಲಕ್ಷ ಸಂದೇಶಗಳನ್ನು ಸ್ಥಗಿತಗೊಳಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ವಂಚನೆ ಎಸಗುವವರು ವಿದೇಶಗಳಿಂದ ಭಾರತದ ಮೊಬೈಲ್ ಕೋಡ್ ಸಂಖ್ಯೆ ಬಳಸಿಯೇ ಗ್ರಾಹಕರ ಮೊಬೈಲ್ಗಳಿಗೆ ಕರೆ ಮಾಡುತ್ತಾರೆ. ತಂತ್ರಾಂಶ ಅಳವಡಿಕೆಯಿಂದಾಗಿ ಇಂತಹ ಕರೆಗಳಿಗೆ ತಡೆ ಬಿದ್ದಿದೆ ಎಂದು ಹೇಳಿದ್ದಾರೆ.

ಆತ್ಮನಿರ್ಭರ ಭಾರತಕ್ಕೆ ಸರ್ಕಾರ ಒತ್ತು ನೀಡಲಿದೆ. ಹಾಗಾಗಿ, ಮುಂದಿನ ವರ್ಷದ ಏಪ್ರಿಲ್ನೊಳಗೆ ಬಿಎಸ್ಎನ್ಎಲ್ನ 4ಜಿ ಮತ್ತು ಮೇ ತಿಂಗಳಿನೊಳಗೆ 5ಜಿ ಸೇವೆ ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ವಿವರಿಸಿದ್ದಾರೆ.

4ಜಿ ಸೇವೆ ಸಂಬಂಧ ದೇಶದಾದ್ಯಂತ 50 ಸಾವಿರ ಟವರ್ಗಳ ನಿರ್ಮಾಣ ಪೂರ್ಣಗೊಂಡಿದೆ. 1 ಲಕ್ಷ ಬೇಸ್ ಸ್ಟೇಷನ್ಗಳ ನಿರ್ಮಾಣ ಪ್ರಗತಿಯಲ್ಲಿದೆ. ಮುಂದಿನ ವರ್ಷದ ಏಪ್ರಿಲ್– ಮೇ ತಿಂಗಳ ವೇಳೆಗೆ ಈ ಸ್ಟೇಷನ್ಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಬಿಎಸ್ಎನ್ಎಲ್ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ದೂರಸಂಪರ್ಕ ಕ್ಷೇತ್ರದಲ್ಲಿ ಇದನ್ನು ಮುಂಚೂಣಿ ಸ್ಥಾನಕ್ಕೇರಿಸಲು ಕ್ರಮವಹಿಸಲಾಗುವುದು. ಮಾರುಕಟ್ಟೆಯ ಮೌಲ್ಯ ಮತ್ತು ಚಂದಾದಾರರ ಸಂಖ್ಯೆ ಹೆಚ್ಚಳಕ್ಕೆ ಅಗತ್ಯವಿರುವ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ದೇಶದಲ್ಲಿ 4ಜಿ ಸೇವೆಯಿಂದ ದೂರ ಉಳಿದಿರುವ 37 ಸಾವಿರ ಗ್ರಾಮಗಳಿವೆ. ಮುಂದಿನ ವರ್ಷದ ಮಾರ್ಚ್–ಏಪ್ರಿಲ್ ವೇಳೆಗೆ ಈ ಹಳ್ಳಿಗಳಿಗೆ ಸೇವೆ ಒದಗಿಸುತ್ತೇವೆ. ಇದಕ್ಕಾಗಿ 27 ಸಾವಿರ ಬೇಸ್ ಟ್ರಾನ್ಸಿವರ್ ಸ್ಟೇಷನ್ಗಳ (ಬಿಟಿಎಸ್) ಅಗತ್ಯವಿದೆ. ಈ ಪೈಕಿ 10 ಸಾವಿರ ಸ್ಟೇಷನ್ಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.