ದೆಹಲಿ: ಇಲ್ಲಿನ ಚಾಣಕ್ಯಪುರಿಯ ಗ್ಯಾರಾ ಮೂರ್ತಿಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯಲ್ಲಿ ಗಾಂಧಿ ಕನ್ನಡಕವೇ ಇಲ್ಲ. ಗಾಂಧಿ ಪ್ರತಿಮೆಯಲ್ಲಿದ್ದ ಕನ್ನಡಕ ಕಾಣೆಯಾಗಿ ಬರೋಬ್ಬರಿ 18 ವರ್ಷಗಳಾಗಿವೆ.ದೆಹಲಿ ಪೊಲೀಸರು ಕನ್ನಡಕ ಕಾಣೆಯಾಗಿರುವ ಪ್ರಕರಣ ದಾಖಲಿಸಿದ್ದರೂ, ಇಲ್ಲಿಯವರೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

1999 ಡಿಸೆಂಬರ್ ತಿಂಗಳಲ್ಲಿ ಮದರ್ ತೆರೆಸಾ ಕ್ರೆಸೆಂಟ್ನ ಹೂದೋಟದ ಕೆಲಸಗಾರರೊಬ್ಬರು ಗಾಂಧಿ ಪ್ರತಿಮೆಯಲ್ಲಿ ಕನ್ನಡಕ ಇಲ್ಲದೇ ಇರುವುದನ್ನು ಗಮನಕ್ಕೆ ತಂದಿದ್ದರು. ತಕ್ಷಣವೇ ಕನ್ನಡಕ ನಾಪತ್ತೆಯಾಗಿರುವ ಬಗ್ಗೆ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಪೊಲೀಸರು ಎಫ್ಐಆರ್ ದಾಖಲಿಸಲಿಲ್ಲ.
18 ವರ್ಷಗಳ ಈ ಪ್ರಕರಣವನ್ನು ಪೊಲೀಸರೂ ಮರೆತಿದ್ದಾರೆ.

ಕಲ್ಲಿನಲ್ಲಿ ಕೆತ್ತಲಾದ ಕನ್ನಡಕವನ್ನು ಗಾಂಧಿ ಪ್ರತಿಮೆಗೆ ಇಡಲಾಗಿತ್ತು. ಕನ್ನಡಕದ ಕಾಲು ಒಡೆಯಲಾಗಿತ್ತುಈ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ನೆನಪಿಲ್ಲ ಎಂದು ಕನ್ನಡಕ ನಾಪತ್ತೆಯಾಗಿರುವುದನ್ನು ಮೊದಲು ಗಮನಿಸಿದ ಎನ್ಡಿಎಂಸಿ ಹೂದೋಟದ ಕೆಲಸಗಾರ 56 ವರ್ಷದ ಮನೋಹರ್ ಲಾಲ್ ಗೋಸೈನ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಪ್ರಕರಣ ನಡೆದ ವೇಳೆ ಚಾಣಕ್ಯಪುರಿ ಪೊಲೀಸ್ ಠಾಣೆಯಲಿದ್ದ, ಈಗ ನಿವೃತರಾಗಿರುವ ಪೊಲೀಸ್ ಅಧಿಕಾರಿ ಶ್ರೀಕಾಂತ್ ಯಾದವ್ ಆಗ ಪ್ರಕರಣ ಭೇದಿಸಲಾಗಲಿಲ್ಲ ಎಂದಿದ್ದಾರೆ.
ಈ ರೀತಿ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದರೆ ಇಂಥಾ ಕೃತ್ಯಗಳನ್ನು ಇನ್ನು ಮುಂದೆ ಎಸಗದಂತೆ ಎಚ್ಚರವಹಿಸಲು ಜಂಕ್ಷನ್ನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದಿದ್ದಾರೆ ಅವರು.

ಗಾಂಧಿ ಪ್ರತಿಮೆಗೆ ಲೋಹದಿಂದ ಮಾಡಿದ ಕನ್ನಡಕವನ್ನು ತೊಡಿಸಿದರೂ ಅದು ಪದೇ ಪದೇ ಕಾಣೆಯಾಗುತ್ತಿದೆ ಎಂದಿದ್ದಾರೆ ಎನ್ಡಿಎಂಸಿ ಅಧಿಕಾರಿಗಳು.ಆದಾಗ್ಯೂ, ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಲೇ ಇಲ್ಲ ಎಂದು ಕೆಲವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.