ನವದೆಹಲಿ: ‘ಅಶೋಕ್ ಗೆಹಲೋತ್ ಅಥವಾ ಶಶಿ ತರೂರ್ ಇವರಲ್ಲಿ ಯಾರೇ ಕಾಂಗ್ರೆಸ್‌ನ ಅಧ್ಯಕ್ಷರಾಗಲಿ, ಅವರು ರಾಹುಲ್ ಗಾಂಧಿ ಅವರ ಕೈಗೊಂಬೆಗಳಾಗಿಯೇ ಇರುತ್ತಾರೆ’ ಎಂದು ಬಿಜೆಪಿ ವ್ಯಂಗ್ಯಮಾಡಿದೆ.

ಸುದ್ದಿಗಾರರೊಂದಿಗೆ ಬುಧವಾರ ಇಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್,‘ಎರಡು ದಶಕಗಳ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹುದ್ದೆಗೆ ಸ್ಪರ್ಧೆಯನ್ನು ನೋಡುವಂತಾಗಿದೆ.ಒಂದು ವೇಳೆ ರಾಹುಲ್ ಪಕ್ಷದ ಸಾರಥ್ಯ ವಹಿಸಲು ಒಪ್ಪದಿದ್ದರೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಸ್ಪರ್ಧಿಸುವಂತೆ ಸೂಚಿಸಲಾಗಿದೆ ಅಷ್ಟೇ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆ ಪ್ರಚಾರ ಪೋಸ್ಟರ್ನಲ್ಲಿ ಸಾವರ್ಕರ್ ಫೋಟೊ

ಕಾಂಗ್ರೆಸ್‌ನ ‘ಭಾರತ್ ಜೋಡೊ ಯಾತ್ರೆ’ಯನ್ನು ‘ಭ್ರಷ್ಟಾಚಾರ ಜೊಡೊ ಯಾತ್ರೆ’ ಎಂದು ಕರೆದಿರುವ ಟಾಮ್, ಇದು ಕನ್ಯಾಕುಮಾರಿಯಲ್ಲಿ ಡಿಎಂಕೆಯ ‘2ಜಿ ಪಾಲುದಾರರೊಂದಿಗೆ ಶುರುವಾಗಿದೆ ಎಂದೂ ಹೇಳಿದ್ದಾರೆ.

‘ಯಾತ್ರೆಯು ಈಗ ಕೇರಳಕ್ಕೆ ಕಾಲಿಟ್ಟಿದ್ದು, ದೆಹಲಿಯ ಎಎಪಿ ಸರ್ಕಾರದ ಅಬಕಾರಿ ನೀತಿಯ ಭ್ರಷ್ಟಾಚಾರ ಕುರಿತು ರಾಹುಲ್ ಗಾಂಧಿ ಜಾಣಕಿವುಡು–ಮೌನವನ್ನು ವಹಿಸಿದ್ದಾರೆ. ದೆಹಲಿಯ ಭ್ರಷ್ಟಾಚಾರವು ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ಅಬಕಾರಿ ನೀತಿಯ ನಕಲು ಆಗಿದೆ’ ಎಂದೂ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.