ಪಣಜಿ: ದಕ್ಷಿಣ ಗೋವಾದ ಗ್ರಾಮವೊಂದರಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಸಚಿವ ಸುಭಾಷ್ ಫಲ್ ದೇಸಾಯಿ ಗಾಯಗೊಂಡಿದ್ದಾರೆ.

ಸೋಮವಾರ ಶಿವಾಜಿ ಅವರ 394ನೇ ಜನ್ಮ ವಾರ್ಷಿಕೋತ್ಸವವಾಗಿತ್ತು. ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆದಿದ್ದವು. ಮಾರ್ಗಾಂವ್ ಪಟ್ಟಣ ಸಮೀದ ಸಾವೊ ಜೋಸ್ ಡೇ ಏರಿಯಲ್ ಗ್ರಾಮದಲ್ಲಿ ಪ್ರತಿಮೆಯೊಂದನ್ನು ಅನಾವರಣಗೊಳಿಸಿದ್ದು, ಇದಕ್ಕೆ ಗ್ರಾಮದ ಮತ್ತೊಂದು ಗುಂಪು ತಕರಾರು ತೆಗೆದಿತ್ತು.

‘ಪ್ರತಿಮೆ ಸ್ಥಾಪನೆ ವಿರೋಧಿಸಿದ್ದ ಗುಂಪು ಕಲ್ಲುತೂರಾಟ ನಡೆಸಿತು. ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಲು ನಾನು ಮುಂದಾಗಿದ್ದೆ. ಒಂದು ಹಂತದಲ್ಲಿ ಗುಂಪು ಹಿಂಸೆಗೆ ಇಳಿಯಿತು. ಕಾರಿಗೆ ಹತ್ತುವಾಗ ಕಲ್ಲು ತೂರಲಾಗಿದೆ. ನನಗೆ ಅಲ್ಪಪ್ರಮಾಣ ಪೆಟ್ಟಾಗಿದೆ. ಕೋಮುಸೌಹಾರ್ದ ಕಾಪಾಡುವ ಉದ್ದೇಶದಿಂದ ಈ ಕುರಿತು ಪೊಲೀಸರಿಗೆ ದೂರು ನೀಡಿಲ್ಲ’ ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.