ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ತೀತ್ವಾಲ್‌ನಲ್ಲಿ ನಿರ್ಮಿಸಲಾಗಿರುವ ಶಾರದಾ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಕರ್ನಾಟಕದ ಶೃಂಗೇರಿಯಿಂದ ಕಳುಹಿಸಲಾದ ಶಾರದಾ ದೇವಿ ವಿಗ್ರಹವು ಶುಕ್ರವಾರ ಇಲ್ಲಿಗೆ ತಲುಪಿದೆ.

ಜಮ್ಮು ನಗರದ ಪ್ರವೇಶದ್ವಾರ ಖುಂಜ್ವಾನಿಯಲ್ಲಿ ಭಕ್ತರು ಪ್ರಾಚೀನ ಕಾಶ್ಮೀರದ ಮುಖ್ಯ ದೇವತೆಗೆ ಪುಷ್ಪವೃಷ್ಟಿ ನೆರವೇರಿಸಿ, ಭಜನೆಗಳನ್ನು ಹಾಡುವ ಮೂಲಕ ಸ್ವಾಗತಿಸಿದರು.

ಪಂಚಲೋಹಗಳಿಂದ ಮಾಡಿದ ವಿಗ್ರಹವನ್ನು ನಂತರ ಕಾಶ್ಮೀರಿ ಪಂಡಿತ್ ಸಭಾಕ್ಕೆ (ಕೆಪಿಎಸ್) ತರಲಾಯಿತು. ಅಲ್ಲಿ ನೂರಾರು ಕಾಶ್ಮೀರಿ ಪಂಡಿತರು ದೇವಿಯನ್ನು ಸ್ವಾಗತಿಸಿದರು.

’ನಾವು ಶೃಂಗೇರಿಯಿಂದ ಶಾರದಾ ದೇವಿ ವಿಗ್ರಹವನ್ನು ತಂದಿದ್ದೇವೆ. ತೀತ್ವಾಲ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಶಾರದಾ ಮಾತಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಮಾರ್ಚ್ 22 ರಂದು ದೇವಸ್ಥಾನ ಉದ್ಘಾಟಿಸಲಾಗುವುದು’ ಎಂದು ಸೇವ್ ಶಾರದಾ ಕಮಿಟಿ ಕಾಶ್ಮೀರ (ಎಸ್ಎಸ್‌ಕೆ) ಸಂಸ್ಥಾಪಕ ರವೀಂದರ್ ಪಂಡಿತ್ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ತಿಂಗಳು ಶೃಂಗೇರಿಯಿಂದ ಪ್ರಾರಂಭವಾದ ವಿಗ್ರಹದ ಪಯಣ ಬೆಂಗಳೂರು, ಮುಂಬೈ, ಅಹಮದಾಬಾದ್, ಜೈಪುರ, ದೆಹಲಿ ಮತ್ತು ಅಮೃತಸರ ಸೇರಿದಂತೆ ವಿವಿಧ ನಗರಗಳ ಮೂಲಕ ಜಮ್ಮು ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.