ನವದೆಹಲಿ: ಅಫ್ಗಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ– 2019ರ (ಸಿಎಎ) ಅಡಿ ಭಾರತದ ಪೌರತ್ವ ಒದಗಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ.

ಪೌರತ್ವ ಹೊಂದಲು ಬಯಸುವವರ ತಂದೆ, ಅಜ್ಜ ಅಥವಾ ಮುತ್ತಜ್ಜಂದಿರಲ್ಲಿ (ಮೂರು ತಲೆಯಾರಿನಲ್ಲಿ ಯಾವುದೇ ಒಂದು ತಲೆಮಾರು) ಯಾರಾದರೂ ಈ ದೇಶದಲ್ಲಿ ನೆಲೆಸಿದ್ದ ಕುರಿತು ಕೇಂದ್ರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರ ಅಥವಾ ಅರೆ ನ್ಯಾಯಾಂಗ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿದ್ದರೆ, ಅಂಥವರು ಪೌರತ್ವ ಕೋರಿ ಸಲ್ಲಿಸುವ ಅರ್ಜಿಯು ಮಾನ್ಯತೆ ಪಡೆಯಲಿದೆ.

ಅರ್ಜಿ ಸಲ್ಲಿಸಲು ಬಯಸುವ ಹಲವರು ಪೌರತ್ವ ತಿದ್ದುಪಡಿ ನಿಯಮ– 2024ರ ಪ್ರತ್ಯೇಕ ಅನುಚ್ಛೇದಿಂದಾಗಿ ಪ್ರಾಯಾಸಪಡುತ್ತಿದ್ದರು. ಇದನ್ನು ಮನಗಂಡ ಗೃಹ ಸಚಿವಾಲಯವು ನಿಯಮದಲ್ಲಿ ಸಡಿಲಿಕೆ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.