ನವದೆಹಲಿ: 2021ರಲ್ಲಿ ಹೊರಡಿಸಲಾದ ಹೊಸ ಐಟಿ ನಿಯಮಗಳನ್ನು ಉಲ್ಲಂಘನೆ ಮತ್ತು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 67 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರವು ಇಂಟರ್ನೆಟ್ ಕಂಪನಿಗಳಿಗೆ ಆದೇಶಿಸಿದೆ.

ಪುಣೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಮತ್ತು ಉತ್ತರಾಖಂಡ ಹೈಕೋರ್ಟ್‌ನ ಆದೇಶ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ನಿರ್ದೇಶನಗಳನ್ನು ಆಧರಿಸಿ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಟೆಲಿಕಾಂ ಇಲಾಖೆ ಸೂಚಿಸಿದೆ.

‘ಮಾಹಿತಿ ತಂತ್ರಜ್ಞಾನದ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021 ರ ನಿಯಮ 3(2)(ಬಿ) ಜೊತೆಗೆ ಉತ್ತರಾಖಂಡ ಹೈಕೋರ್ಟ್ ಆದೇಶದಂತೆ ಮಹಿಳೆಯರ ಘನತೆಗೆ ಧಕ್ಕೆ ತರುವ ವಿಷಯಗಳನ್ನೊಳಗೊಂಡ ಈ ಕೆಳಗಿನ ವೆಬ್‌ಸೈಟ್‌ಗಳನ್ನು ತಕ್ಷಣವೇ ತೆಗೆದುಹಾಕಲು (ನಿರ್ಬಂಧಿಸಲು) ನಿರ್ದೇಶಿಸಲಾಗಿದೆ’ಎಂದು ಸೆಪ್ಟೆಂಬರ್ 24ರ ಆದೇಶದಲ್ಲಿ ತಿಳಿಸಲಾಗಿದೆ.

2021ರ ಐಟಿ ನಿಯಮಗಳ ಕಡ್ಡಾಯ ಜಾರಿಗೆ ನಿರ್ದೇಶನ ನೀಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು, ವ್ಯಕ್ತಿಯ ಪೂರ್ಣ ಅಥವಾ ಭಾಗಶಃ ನಗ್ನತೆಯನ್ನು ತೋರಿಸುವ ಅಥವಾ ಯಾವುದೇ ಲೈಂಗಿಕ ಕ್ರಿಯೆ ಅಥವಾ ನಡವಳಿಕೆಯನ್ನು ಪ್ರದರ್ಶಿಸುವ ವಿಷಯವನ್ನು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.