ನವದೆಹಲಿ: ಆಸ್ಪತ್ರೆಗಳು ಮತ್ತು ರಕ್ತನಿಧಿಗಳು ಇನ್ನು ಮುಂದೆ ರಕ್ತಕ್ಕೆ ಸಂಸ್ಕರಣಾ ಶುಲ್ಕವನ್ನು ಮಾತ್ರ ವಿಧಿಸಲು ಅವಕಾಶವಿರಲಿದೆ. ರಕ್ತಕ್ಕೆ ದುಬಾರಿ ಶುಲ್ಕ ನಿಗದಿ ಮಾಡುವ ಪ್ರವೃತ್ತಿಗೆ ಅಂತ್ಯ ಹೇಳುವ ಉದ್ದೇಶದಿಂದ ಭಾರತೀಯ ಔಷಧ ಮಹಾ ನಿಯಂತ್ರಕರು (ಡಿಸಿಜಿಐ), ಸಂಸ್ಕರಣಾ ಶುಲ್ಕ ಹೊರತುಪಡಿಸಿ ಇತರ ಎಲ್ಲ ಬಗೆಯ ಶುಲ್ಕಗಳನ್ನು ರದ್ದುಪಡಿಸಿದ್ದಾರೆ.

ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿರುವ ಡಿಸಿಜಿಐ, ‘ರಕ್ತವು ಮಾರಾಟಕ್ಕಿಲ್ಲ’ ಎಂಬ ಅಭಿಪ್ರಾಯದ ಆಧಾರದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಔಷಧಗಳ ಸಮಾಲೋಚನಾ ಸಮಿತಿಯ ಸಭೆಯ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಡಿಸಿಜಿಐ, ‘ರಕ್ತವು ಮಾರಾಟಕ್ಕೆ ಅಲ್ಲ, ಅದಕ್ಕೆ ರಕ್ತನಿಧಿಗಳು ಸಂಸ್ಕರಣಾ ಶುಲ್ಕವನ್ನು ಮಾತ್ರ ವಿಧಿಸಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದು ಹೇಳಿದೆ. ಸಂಸ್ಕರಣಾ ಶುಲ್ಕವು ₹250ರಿಂದ ₹1,550ರವರೆಗೆ ಇರುತ್ತದೆ.

ಪರಿಷ್ಕೃತ ನಿಯಮಗಳಿಗೆ ಬದ್ಧರಾಗಿ ಇರುವಂತೆ ಎಲ್ಲ ರಕ್ತನಿಧಿಗಳಿಗೆ ಸೂಚನೆ ನೀಡಬೇಕು ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗಿದೆ.

ಖಾಸಗಿ ಆಸ್ಪತ್ರೆಗಳು ಪ್ರತಿ ಯೂನಿಟ್ ರಕ್ತಕ್ಕೆ (ದಾನಿಗಳು ಇಲ್ಲದಿದ್ದ ಸಂದರ್ಭದಲ್ಲಿ) ₹3 ಸಾವಿರದಿಂದ ₹8 ಸಾವಿರದವರೆಗೂ ಶುಲ್ಕ ವಿಧಿಸುತ್ತಿವೆ ಎಂದು ಸರ್ಕಾರಿ ಮೂಲಗಳು ಖಚಿತಪಡಿಸಿವೆ. ರಕ್ತದ ಕೊರತೆ ಇದ್ದಾಗ ಅಥವಾ ಅಪರೂಪದ ಗುಂಪಿನ ರಕ್ತ ಬೇಕಿದ್ದಾಗ ಶುಲ್ಕ ಇನ್ನಷ್ಟು ಹೆಚ್ಚಿರುತ್ತದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.