ಓಕಾ: ಭಾರತೀಯ ಕರಾವಳಿ ರಕ್ಷಣಾ ಪಡೆಯ(ಐಜಿಸಿ) ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದರಿಂದ ದೇಶದ ಕರಾವಳಿಯು ಸುರಕ್ಷಿತವಾಗಿರಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಶುಕ್ರವಾರ ತಿಳಿಸಿದರು.

ಗುಜರಾತ್‌ನ ಓಕಾದಲ್ಲಿ ಐಸಿಜಿಯ ಹೋವರ್‌ಕ್ರಾಫ್ಟ್ ನಿರ್ವಹಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅರಮನೆ ಅವರು, ‘ಪಾಕಿಸ್ತಾನದ ಕರಾವಳಿ ಸೇರಿದಂತೆ ಸಮುದ್ರದಲ್ಲಿನ ದೂರದ ಪ್ರದೇಶಗಳ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ಕರಾವಳಿ ಪಡೆ ಹೊಂದಿದೆ. ಭಾರತೀಯ ಕರಾವಳಿ ಪಡೆಗೆ ಅಗತ್ಯವಾದ ಅತ್ಯುತ್ತಮ ಉಪಕರಣಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.

‘ಐಜಿಸಿ ಬಳಿ ಈಗ ಹಲವಾರು ಗಸ್ತು ನೌಕೆಗಳು, ವೇಗದ ದೋಣಿಗಳು ಮತ್ತು ಯುದ್ಧವಿಮಾನಗಳು ಇವೆ. ಹೋವರ್‌ಕ್ರಾಫ್ಟ್‌ಗಳ ಮೂಲಕ ಜೌಗು ದ್ವೀಪಗಳಂತಹ ಕಷ್ಟಕರವಾದ ಪ್ರದೇಶಗಳನ್ನು ತಲುಪಬಹುದು’ ಎಂದು ತಿಳಿಸಿದರು.

‘ಭಾರತೀಯ ನೌಕಾಪಡೆ, ಗಡಿ ಭದ್ರತಾ ಪಡೆ, ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಗಳೊಂದಿಗೆ ಸೇರಿ ಐಜಿಸಿಯು ಸಮುದ್ರ ಮಾರ್ಗದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ಪ್ರಯತ್ನಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.