ಶ್ರೀನಗರ: ಕೇಬಲ್ ಟಿವಿ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ 1.5 ಲಕ್ಷ ಉಚಿತ ಡಿಡಿ ಡಿಶ್ ಆಂಟೆನಾಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಮಂಗಳವಾರ ತಿಳಿಸಿದ್ದಾರೆ.

ಗಾಂದರ್‌ಬಾಲ್ ಜಿಲ್ಲೆಯ ಕಂಗನ್ ಪ್ರದೇಶಕ್ಕೆ ಭೇಟಿ ನೀಡಿದ್ದ ಅಪೂರ್ವ ಚಂದ್ರ ಅವರು ಈ ಪ್ರದೇಶದಲ್ಲಿ ಉಚಿತ ಡಿಡಿ ಡಿಶ್ ವಿತರಿಸಿ ಮಾತನಾಡಿದರು.

'ಗಡಿ ಪ್ರದೇಶದ ಬಹಳ ದೂರದ ಪ್ರದೇಶಗಳಲ್ಲಿ, ಕೇಬಲ್ ಟಿವಿ ಸಂಪರ್ಕ ಹೊಂದಿರದ ಸ್ಥಳಗಳಲ್ಲಿ ಬದುಕುತ್ತಿರುವವರಿಗೆ ಟಿವಿ ಸಂಪರ್ಕವನ್ನು ಒದಗಿಸಲು ಸುಮಾರು 1.5 ಲಕ್ಷ ಉಚಿತ ಡಿಡಿ ಡಿಶ್‌ಗಳನ್ನು ವಿತರಿಸುವ ಯೋಚನೆಯನ್ನು ಸರ್ಕಾರ ಹೊಂದಿದೆ. ಟೆಂಡರ್ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ' ಎಂದು ಅಪೂರ್ವ ಚಂದ್ರ ತಿಳಿಸಿದರು.

ಇದೇ ವೇಳೆ, ಹಲವು ಸವಾಲುಗಳ ಮಧ್ಯೆ 'ದೂರದರ್ಶನ ಕೇಂದ್ರ ಶ್ರೀನಗರ'ದ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.