ನವದೆಹಲಿ: ನೀರ್ಗಲ್ಲು ಸರೋವರಗಳಲ್ಲಿ ಪ್ರವಾಹ ಎದುರಿಸಿ ದುರ್ಬಲಗೊಂಡಿರುವ ನಿಯೋಜಿತ ಮತ್ತು ನಿರ್ಮಾಣ ಹಂತದಲ್ಲಿರುವ ಅಣೆಕಟ್ಟುಗಳ ವಿನ್ಯಾಸವನ್ನು ಪರಿಶೀಲಿಸುವುದಾಗಿ ಸರ್ಕಾರ ಗುರುವಾರ ಹೇಳಿದೆ.

ಈ ಅಣೆಕಟ್ಟುಗಳು ಪ್ರವಾಹ ಪರಿಸ್ಥಿತಿಯ ನಡುವೆಯೂ ಗಟ್ಟಿಯಾಗಿ ಇರಬಲ್ಲ ಸಾಮರ್ಥ್ಯ ಹೊಂದಿವೆಯೇ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಜಲ ಆಯೋಗ ನಿರ್ಧರಿಸಿದೆ.

ನೀರ್ಗಲ್ಲು ಸರೋವರಗಳಲ್ಲಿ ಉಂಟಾಗುವ ಏಕಾಏಕಿ ಪ್ರವಾಹ (ಜಿಎಲ್‌ಒಎಫ್)ಕ್ಕೆ ಅಣೆಕಟ್ಟು ನಿರ್ಮಾಣದ ವೈಫಲ್ಯವೇ ಕಾರಣವಾಗಿದೆ. ಹೀಗಾಗಿ ವಿನ್ಯಾಸದ ಕುರಿತು ಅಧ್ಯಯನ ನಡೆಸುವುದು ಕಡ್ಡಾಯವಾಗಿದೆ ಎಂದು ಹೇಳಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿದ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಅವರು, ‘ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ವರೆಗೆ ಹಿಮಾಲಯ ಪ್ರದೇಶದಾದ್ಯಂತ 902 ಹಿಮನದಿ ಸರೋವರಗಳು ಮತ್ತು ಜಲಮೂಲಗಳ ಮೇಲ್ವಿಚಾರಣೆಯನ್ನು ಕೇಂದ್ರ ಜಲ ಆಯೋಗವು ನಡೆಸುತ್ತಾ ಬಂದಿದೆ’ ಎಂದು ಹೇಳಿದರು.

ವಿದ್ಯುತ್ ಸಚಿವಾಲಯವು 47 ಅಣೆಕಟ್ಟುಗಳನ್ನು ಗುರುತಿಸಿದ್ದು, ಈ ಪೈಕಿ 38 ನಿಯೋಜಿತಗೊಂಡಿವೆ. ಒಂಬತ್ತು ಅಣೆಕಟ್ಟುಗಳು ನಿರ್ಮಾಣ ಹಂತದಲ್ಲಿದೆ. ಇವುಗಳಲ್ಲಿ 31 ಯೋಜನೆಗಳಿಗೆ ಜಿಎಲ್‌ಒಎಫ್ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.