ನೋಯ್ಡಾ: ವಿವಿಧ ರೀತಿಯ ತ್ಯಾಜ್ಯ ವಸ್ತುಗಳಿಂದ ಮಾಡಲಾದ ಹಾಗೂ ಪುನರ್ ಬಳಕೆ ಮಾಡಬಹುದಾದ ಟೈಲ್ಸ್ಗಳನ್ನು ಪಾದಚಾರಿ ಮಾರ್ಗಗಳಲ್ಲಿ ಬಳಸಲು ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (GNIDA) ಮುಂದಾಗಿದೆ.

ಇದಕ್ಕಾಗಿ GNIDA ಕೇಂದ್ರ ಸರ್ಕಾರದ ರಸ್ತೆ ಸಂಶೋಧನಾ ಸಂಸ್ಥೆ (CRRI) ಜೊತೆ ಒಪ್ಪಂದ ಮಾಡಿಕೊಂಡಿದೆ.

‘ಈ ರೀತಿ ತ್ಯಾಜ್ಯ ವಸ್ತುಗಳಿಂದ ಪಾದಚಾರಿ ಮಾರ್ಗದ ಪೇವರ್ ಬ್ಲಾಕ್ ಟೈಲ್ಸ್ಗಳನ್ನು ನಗರದ ಪಾದಚಾರಿ ಮಾರ್ಗಗಳಿಗೆ ಬಳಸುತ್ತಿರುವುದು ದೇಶದಲ್ಲಿಯೇ ನೋಯ್ಡಾ ನಗರ ಮೊದಲನೇಯದ್ದು’ ಎಂದು GNIDA ಹೇಳಿದೆ.

‘ಸುಂದರ ರಸ್ತೆಗಳು ನೋಯ್ಡಾ ನಗರದ ಹೆಗ್ಗುರುತುಗಳು. ಇದಕ್ಕಾಗಿ ನಾವು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಲು ಮುಂದಾಗಿದ್ದೇವೆ. ರಸ್ತೆ ಸಂಶೋಧನಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪಾಲಿಥಿನ್ ಮುಂತಾದ ತ್ಯಾಜ್ಯ ವಸ್ತುಗಳಿಂದ ಮಾಡಿದ ಮರುಬಳಕೆ ಮಾಡಬಹುದಾದ ಪೇವರ್ ಬ್ಲಾಕ್ಗಳನ್ನು ಪಾದಚಾರಿ ಮಾರ್ಗಗಳಿಗೆ ಬಳಸಲು ತೀರ್ಮಾನಿಸಲಾಗಿದೆ’ ಎಂದು GNIDA ಸಿಇಒ ಎನ್.ಜಿ ರವಿ ಕುಮಾರ್ ತಿಳಿಸಿದ್ದಾರೆ.

‘ರಸ್ತೆ ಸಂಶೋಧನಾ ಸಂಸ್ಥೆ ವತಿಯಿಂದ ಈ ಪೇವರ್ ಬ್ಲಾಕ್ಗಳು ತಯಾರಾಗುತ್ತವೆ. ಗುಣಮಟ್ಟವೂ ಉತ್ತಮವಾಗಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹವು’ ಎಂದು ರವಿ ಕುಮಾರ್ ಹೇಳಿದ್ದಾರೆ.

ಹೊಸ ತಂತ್ರಜ್ಞಾನ ಬಳಸಿಕೊಂಡು ನಾವು ನೋಯ್ಡಾ ನಗರವನ್ನು ಸುಂದರವಾಗಿ ನಿರ್ಮಿಸಲು ಮುಂದಾಗಿದ್ದೇವೆ ಎಂದು GNIDA ಹೆಚ್ಚುವರಿ ಸಿಇಒ ಅನ್ನಪೂರ್ಣ ಗರ್ಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.