ಶ್ರೀಹರಿಕೋಟಾ: ದೇಶದ ಅತ್ಯಾಧುನಿಕ ಸಂವಹನ ಉಪಗ್ರಹವನ್ನು ಇಸ್ರೊ ಬುಧವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇದು ಭಾರತದ ವಾಯುಪಡೆಯ ಸಂವಹನ ವ್ಯವಸ್ಥೆಯನ್ನು ಉತ್ತಮಪಡಿಸುವ ಉದ್ದೇಶ ಹೊಂದಿದೆ.

ಜಿಎಸ್ಎಲ್ವಿ– ಎಫ್11 ರಾಕೆಟ್ ಮೂಲಕ 2,250 ಕೆ.ಜಿ ತೂಕದ ಜಿಸ್ಯಾಟ್ 7ಎ ಉಪಗ್ರಹವನ್ನು ಬುಧವಾರ ಸಂಜೆ 4.10ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ತನ್ನ ಒಳಗೆ ಇರುವ ವ್ಯವಸ್ಥೆಯ ಮೂಲಕ ಈ ಉಪಗ್ರಹವು ಸ್ವಯಂಚಾಲಿತವಾಗಿ ತನ್ನ ಅಂತಿಮ ಕಕ್ಷೆಗೆ ಸೇರಿಕೊಳ್ಳಲಿದೆ. ಉಡಾವಣಾ ವಾಹನದಿಂದ ಪ್ರತ್ಯೇಕಗೊಂಡ ಕೆಲವು ದಿನಗಳ ಬಳಿಕ ಈ ಉಪಗ್ರಹವು ಅಂತಿಮ ಕಕ್ಷೆ ಸೇರಲಿದೆ ಎಂದು ಇಸ್ರೊ ತಿಳಿಸಿದೆ.

ಭಾರತೀಯ ವಾಯುಪಡೆಯ ವಿಮಾನ ಸಂವಹನಕ್ಕೆ ಈ ಉಪಗ್ರಹ ನೆರವು ನೀಡಲಿದೆ.

35 ದಿನಗಳಲ್ಲಿ ಇಸ್ರೊದ ಮೂರನೇ ಯಶಸ್ವಿ ಕಾರ್ಯಾಚರಣೆ ಇದು. ಈ ಉಪಗ್ರಹವು ಎಂಟು ವರ್ಷ ಕಾರ್ಯನಿರ್ವಹಿಸಲಿದೆ. ಇನ್ನಷ್ಟು ಎತ್ತರದ ಕಕ್ಷೆಗೆ ಏರಿಸುವ ಕಾರ್ಯಾಚರಣೆಗೆ ಬೆಂಗಳೂರಿನ ಕೇಂದ್ರದಿಂದ ಗುರುವಾರ ಬೆಳಿಗ್ಗೆ ಚಾಲನೆ ನೀಡಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

* 2018ರ ಏಳನೇ ಉಡಾವಣೆ, ಈ ವರ್ಷದ ಕೊನೆಯ ಕಾರ್ಯಾಚರಣೆ
* ಜಿಎಸ್ಎಲ್ವಿ–ಎಫ್11 ಇಸ್ರೊದ ನಾಲ್ಕನೇ ತಲೆಮಾರಿನ ಉಡಾವಣಾ ವಾಹನ
* ಜಿಎಸ್ಎಲ್ವಿ–ಎಫ್11 ಮೂಲಕ 69ನೇ ಉಡಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.