ಪ್ರಯಾಗರಾಜ್, ಉತ್ತರ ಪ್ರದೇಶ: ಮಸೀದಿ ಆಡಳಿತ ಮಂಡಳಿಯ ಮೇಲ್ಮನವಿ ಮೇರೆಗೆ ಕಾಶಿ ವಿಶ್ವನಾಥ ದೇವಾಲಯ-ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನ. 28 ಕ್ಕೆ ಮುಂದೂಡಿದೆ.

ಮುಂದಿನ ದಿನಾಂಕದಂದು ಈ ಪ್ರಕರಣ ವಿಚಾರಣೆಯನ್ನು ಮುಂದೂಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದೇವಾಲಯದ ಪರವಾಗಿ ಹಾಜರಾದ ವಕೀಲ ಸಿ.ಎಸ್.ವೈದ್ಯನಾಥನ್, ತಾರ್ಕಿಕ ಅಂತ್ಯಕ್ಕೆ ಬರಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮೂಲಕಸತ್ಯ ಹೊರತರಲು ಸಮೀಕ್ಷೆ ನಡೆಸಬೇಕು ಎಂದು ವಾದಿಸಿದರು.

ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿಯು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ 1991 ರಲ್ಲಿ ಸಲ್ಲಿಸಿದ ಮೂಲ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು.

18ನೇ ಶತಮಾನದ ಕಾಶಿ ವಿಶ್ವನಾಥ ದೇವಾಲಯವನ್ನು ಪ್ರಸ್ತುತ ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ಮರುಸ್ಥಾಪಿಸಬೇಕೆಂದು ಮೂಲ ದಾವೆಯಲ್ಲಿ ಕೋರಲಾಗಿದೆ. ಮಸೀದಿ ದೇವಾಲಯದ ಒಂದು ಭಾಗ ಎಂದುಅರ್ಜಿದಾರರು ದಾವೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.