ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸರಳ ಬಹುಮತ ಗಳಿಸಿರುವ ಬಿಜೆಪಿ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದೆ.

ಈ ಸಂದರ್ಭದಲ್ಲಿ ಹರಿಯಾಣ ವಿಧಾನಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಹಲವು ಕುತೂಹಲಕಾರಿ ಅಂಶಗಳು ಹೊರಬಂದಿವೆ.

ಹರಿಯಾಣದ ಉಚಾನಾ ಕಲಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದರ್ ಚತುರ್ಭುಜ್ ಅತ್ರಿ ಅವರು ಕೇವಲ 32 ಮತಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ.

ಆ ಮೂಲಕ ಈ ಬಾರಿಯ ಹರಿಯಾಣ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಅಭ್ಯರ್ಥಿ ಎನಿಸಿದ್ದಾರೆ. ದೇವಂದರ್ಗೆ ನಿಕಟ ಪೈಪೋಟಿ ಒಡ್ಡಿದ ಕಾಂಗ್ರೆಸ್ನ ಬ್ರಿಜೇಂದ್ರ ಸಿಂಗ್ ಪರಾಭವಗೊಂಡಿದ್ದಾರೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಈ ಕ್ಷೇತ್ರದ ನಿರ್ಗಮಿತ ಶಾಸಕ, ಜನನಾಯಕ ಜನತಾ ಪಕ್ಷದ ದುಶ್ಯಂತ್ ಚೌಟಾಲಾ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಏತನ್ಮಧ್ಯೆ ನೂಹ್ ಜಿಲ್ಲೆಯ ಫಿರೋಜ್ಪುರ ಜಿರ್ಕಾ ಕ್ಷೇತ್ರದ ಕಾಂಗ್ರೆಸ್ನ ಅಭ್ಯರ್ಥಿ ಮಾಮನ್ ಖಾನ್ ಗರಿಷ್ಠ, 98,441 ಮತಗಳ ಅಂತರದಿಂದ ಜಯಿಸಿದ್ದಾರೆ.

ಈ ಕ್ಷೇತ್ರದ ಹಾಲಿ ಶಾಸಕರಾಗಿರುವ ಖಾನ್, ತನ್ನ ನಿಕಟ ಸ್ಪರ್ಧಿ ಬಿಜೆಪಿಯ ನಸೀಮ್ ಅಹಮ್ಮದ್ ಅವರನ್ನು ಸೋಲಿಸಿದ್ದಾರೆ. ಮಾಮನ್ ಖಾನ್ 1,30,497 ಹಾಗೂ ನಸೀಮ್ 32,056 ಮತಗಳನ್ನು ಗಳಿಸಿದರು.
.Haryana | ನಿಕಟ ಪೈಪೋಟಿ: ಬಿಜೆಪಿಗೆ ಶೇ 39.94, ಕಾಂಗ್ರೆಸ್ಗೆ ಶೇ 39.09 ಮತ.ಸಂಪಾದಕೀಯ | ಹರಿಯಾಣ, ಕಾಶ್ಮೀರ ಫಲಿತಾಂಶ: BJPಗೆ ಹುರುಪು, ಕಾಂಗ್ರೆಸ್ಗೆ ಹಿನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.