ಪ್ರಯಾಗರಾಜ್: ತನ್ನ ಮೂವರು ಸಹೋದ್ಯೋಗಿಗಳ ವಿರುದ್ಧ ಎಸ್.ಸಿ. / ಎಸ್.ಟಿ. ಕಾಯ್ದೆಯಡಿ ಸುಳ್ಳು ಮೊಕದ್ದಮೆ ದಾಖಲಿಸಿದ ಅಲಹಾಬಾದ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿಗೆ ಇಲ್ಲಿನ ಹೈಕೋರ್ಟ್ ₹15 ಲಕ್ಷ ದಂಡ ವಿಧಿಸಿದೆ. ಅಲ್ಲದೆ ಅರೋಪಿತರ ವಿರುದ್ಧದ ಎಫ್‌ಐಆರ್ ಅನ್ನೂ ರದ್ದುಗೊಳಿಸಿದೆ.

ದೂರುದಾರೆ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಕಾನೂನಿನ ಬಗ್ಗೆ ಜ್ಞಾನ ಉಳ್ಳವರಾಗಿದ್ದು, ಸ್ವ ಲಾಭಕ್ಕಾಗಿ ಕಾನೂನಿನ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
.ಮದುವೆ ಆಗದ ಮಗಳಿಗೆ ಪಾಲಕರಿಂದ ಜೀವನಾಂಶ ಪಡೆಯುವ ಹಕ್ಕಿದೆ– ಅಲಹಾಬಾದ್ ಹೈಕೋರ್ಟ್.
‘ಇದು ಕಾನೂನು ಪ್ರಕ್ರಿಯೆಯ ಶುದ್ಧ ದುರುಪಯೋಗದ ಪ್ರಕರಣವಾಗಿದ್ದು, ದೂರುದಾರರು ವಿಭಾಗ ಮುಖ್ಯಸ್ಥರ ವಿರುದ್ಧ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿ, ಅವರನ್ನು ಮತ್ತು ಸಹೋದ್ಯೋಗಿಗಳನ್ನು ಸಿಲುಕಿಸಲು ಪ್ರಯತ್ನಿಸಿದ್ದಾರೆ’ ಎಂದು ನ್ಯಾಯಾಲಯ ಹೇಳಿತು.

‘ಸರಿಯಾಗಿ ಪಾಠ ಮಾಡಿ ಹಾಗೂ ನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳಿ ಎಂದು ಹಿರಿಯ ಸಹೋದ್ಯೋಗಿಗಳು ಅಥವಾ ವಿಭಾಗದ ಮುಖ್ಯಸ್ಥರು ಹೇಳಿದಾಗೆಲ್ಲಾ ಅವರ ವಿರುದ್ಧ ದೂರು ಸಲ್ಲಿಸಲಾಗುತ್ತಿತ್ತು. ಇದು ಮೊದಲನೇ ಪ್ರಕರಣವೇನಲ್ಲ’ ಎಂದು ಕೋರ್ಟ್ ನುಡಿಯಿತು.
.ಲಿವ್–ಇನ್ ಸಂಬಂಧ ತಾತ್ಕಾಲಿಕ: ಅಲಹಾಬಾದ್ ಹೈಕೋರ್ಟ್.
ಪ್ರತಿ ಪ್ರಕರಣದಲ್ಲೂ ಪ್ರಾಧ್ಯಾಪಕಿಗೆ ತಲಾ ₹5 ಲಕ್ಷ ದಂಡ ವಿಧಿಸಿ ಕೋರ್ಟ್ ಆದೇಶಿಸಿತು. ‘ಸುಳ್ಳು ದೂರು ದಾಖಲಿಸಿದ್ದರಿಂದ ಸಹೋದ್ಯೋಗಿಗಳ ಖ್ಯಾತಿ ಮತ್ತು ಸಾರ್ವಜನಿಕ ಗೌರವವನ್ನು ಕಳಂಕಗೊಳಿಸಲಾಗಿದೆ. ಅವರು ತಮ್ಮನ್ನು ರಕ್ಷಿಸಲು ಪೊಲೀಸ್ ಠಾಣೆಯಿಂದ ಕೋರ್ಟ್‌ಗೆ ಅಲೆಯಬೇಕಾಯಿತು’ ಎಂದು ಕೋರ್ಟ್ ಹೇಳಿದೆ.
.ಸಹಜೀವನ ಸಂಬಂಧ ಸಾಮಾಜಿಕ ಸಮಸ್ಯೆ: ಅಲಹಾಬಾದ್ ಹೈಕೋರ್ಟ್ .
ಪ್ರಕರಣವೇನು?

ಮೂವರು ಸಹೋದ್ಯೋಗಿಗಳು ತಮಗೆ ಅವಮಾನ ಮಾಡಿದ್ದಾರೆ. ಬೈಯುವಾಗ ಜಾತಿಯನ್ನು ಪ್ರಸ್ತಾಪಿಸಿದ್ದಾರೆ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕಿ 2016ರ ಆಗಸ್ಟ್ 4ರಂದು ಎಫ್‌ಐಆರ್ ದಾಖಲಿಸಿದ್ದರು.

ಬಳಿಕ ಆರೋಪಿತರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
.ಧ್ವನಿವರ್ಧಕಗಳ ಬಳಕೆ ಮೂಲಭೂತ ಹಕ್ಕಲ್ಲ: ಅಲಹಾಬಾದ್ ಹೈಕೋರ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.