ನವದೆಹಲಿ: ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿದೆ ಎನ್ನಲಾದ ‘ಶಿವಲಿಂಗ’ದ ವೈಶಿಷ್ಟ್ಯಗಳು ಹಾಗೂ ಅದರ ಸ್ವರೂಪವನ್ನು ಪತ್ತೆ ಮಾಡುವುದಕ್ಕಾಗಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್‌ಗೆ (SC) ಅರ್ಜಿ ಸಲ್ಲಿಸಿದ್ದಾರೆ.

‘ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ಮುಂದೂಡಿ 2023ರ ಮೇ 19ರಂದು ನೀಡಿದ್ದ ಆದೇಶ, ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ‘ಶಿವಲಿಂಗ’ದ ಕಾಲಮಾನ ಪತ್ತೆಗಾಗಿ ಅಲಹಾಬಾದ್ ಹೈಕೋರ್ಟ್ ಕಳೆದ ವರ್ಷ ಮೇ 12ರಂದು ನೀಡಿದ್ದ ನಿರ್ದೇಶನದಂತೆ ನಡೆಯಬೇಕಿದ್ದ ಕಾರ್ಬನ್ ಡೇಟಿಂಗ್ ಪರೀಕ್ಷೆ ಮುಂದೂಡಿ ತಾನು ನೀಡಿದ್ದ ಆದೇಶವನ್ನು ತೆರವುಗೊಳಿಸುವಂತೆಯೂ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
.ಜ್ಞಾನವಾಪಿ ಮಸೀದಿಯಿರುವ ಜಾಗದಲ್ಲಿ ಕನ್ನಡ ಶಾಸನ ಪತ್ತೆ: ವಕೀಲ ವಿಷ್ಣು ಶಂಕರ್ ಜೈನ್.ದೇವಸ್ಥಾನದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿ: ಹಿಂದೂ ಅರ್ಜಿದಾರರ ಪರ ವಕೀಲ.
‘ಶಿವಲಿಂಗ ಸುತ್ತಲೂ ನಿರ್ಮಿಸಿರುವ ಕೃತಕ/ಆಧುನಿಕ ಗೋಡೆಗಳು ಹಾಗೂ ನೆಲಹಾಸನ್ನು ತೆರವು ಮಾಡಿ, ವೈಜ್ಞಾನಿಕ ಪರೀಕ್ಷೆ ಕೈಗೊಂಡಾಗ ಮಾತ್ರ ಅದರ ನಿಖರವಾದ ಸ್ವರೂಪವನ್ನು ಪತ್ತೆ ಮಾಡಲು ಸಾಧ್ಯ. ಇದಕ್ಕಾಗಿ ಈಗ ಮುಚ್ಚಲಾಗಿರುವ ಪ್ರದೇಶದ ಉತ್ಖನನ ನಡೆಸಬೇಕು ಹಾಗೂ ಇತರ ವೈಜ್ಞಾನಿಕ ವಿಧಾನಗಳನ್ನು ಬಳಸಿ ಸಮೀಕ್ಷೆ ನಡೆಸಬೇಕು’ ಎಂದೂ ಅರ್ಜಿದಾರರು ಮನವಿ ಮಾಡಿದ್ದಾರೆ.

ಈ ಕುರಿತು ವಕೀಲ ವಿಷ್ಣುಶಂಕರ್ ಜೈನ್ ಅವರ ಮೂಲಕ ಅರ್ಜಿಗಳನ್ನು ಸಲ್ಲಿಸಿರುವ ಮಹಿಳೆಯರು, ಕೋರ್ಟ್ ನಿಗದಿಪಡಿಸುವ ಕಾಲಮಿತಿಯೊಳಗೆ ವರದಿ ಸಲ್ಲಿಸುವಂತೆ ASIಗೆ ನಿರ್ದೇಶನ ನೀಡುವಂತೆಯೂ ಕೋರಿದ್ದಾರೆ.

ಕಾರ್ಬನ್ ಡೇಟಿಂಗ್‌ನಂತ ವೈಜ್ಞಾನಿಕ ಪದ್ಧತಿಗಳ ಮೂಲಕ ಶಿವಲಿಂಗ ಎನ್ನಲಾದ ಆಕೃತಿಯ (ಮುಸ್ಲೀಮರು ಇದನ್ನು ನೀರಿನ ಕಾರಂಜಿ ಎಂದು ಕರೆಯುತ್ತಿದ್ದಾರೆ) ನಿಜವಾದ ಕಾಲವನ್ನು ಅರಿಯಬೇಕು ಎಂದು ವಕೀಲ ವಿಷ್ಣು ಶಂಕರ್ ಜೈನ್ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಂತೆ ASIಗೆ ಸೂಚಿಸುವಂತೆಯೂ ಕೋರಿದರು.

ವಾರಾಣಸಿ ನ್ಯಾಯಾಲಯವು ASI ವರದಿಯನ್ನು ಉಭಯ ಪಕ್ಷಗಾರರಿಗೆ ನೀಡಿದ ಮರುದಿನವೇ ಹಿಂದೂಪರ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಂತಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ, ಹಿಂದೂ ದೇಗುಲದ ಮೇಲೆ ಮಸೀದಿ ಕಟ್ಟಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
.ಜ್ಞಾನವಾಪಿ ಮಸೀದಿ ಸಮೀಕ್ಷೆ: ವರದಿ ಕೇಳಿ 11 ಅರ್ಜಿ.ಜ್ಞಾನವಾಪಿ ಮಸೀದಿ ಜಾಗವನ್ನು ಮುಸ್ಲಿಮರು ಹಿಂದೂಗಳಿಗೆ ಒಪ್ಪಿಸಿ: ಗಿರಿರಾಜ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.