ನವದೆಹಲಿ: ‘ನನ್ನ ಜೀವನದಲ್ಲಿ ₹350 ಕೋಟಿ ಹೇಗಿದೆ ಎಂದು ನಾನು ನೋಡಿಲ್ಲ. ಎಷ್ಟು ಸೊನ್ನೆಗಳಿವೆ ಎಂದು ತಕ್ಷಣಕ್ಕೆ ಕೇಳಿದರೆ ನಾನು ಲೆಕ್ಕ ಹಾಕಬೇಕಾಗುತ್ತದೆ’ ಎಂದು ಒಡಿಶಾದಲ್ಲಿ ನಡೆದ ಆದಾಯ ತೆರಿಗೆ ದಾಳಿಯ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ ಜಾಗದಲ್ಲಿ ನಗದು ಸಿಕ್ಕಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಚಿದಂಬರಂ, ‘ವ್ಯಕ್ತಿಯ ವ್ಯವಹಾರಕ್ಕೆ ಸಂಬಂಧಿಸಿದ ನಗದು ವಶಪಡಿಸಿಕೊಂಡಿರುವುದಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಪಕ್ಷವನ್ನು ನಡೆಸುತ್ತೇವೆ. ಪಕ್ಷದಲ್ಲಿ ಸದಸ್ಯರುಗಳು ಇರುತ್ತಾರೆ. ಅವರ ವ್ಯವಹಾರದ ವಿಷಯದಲ್ಲಿ ಪಕ್ಷ ಮೂಗು ತೂರಿಸುವುದಿಲ್ಲ. ಈ ಪ್ರಶ್ನೆಗೆ ಅವರೇ (ಸಾಹು) ಉತ್ತರ ನೀಡುತ್ತಾರೆ’ ಎಂದರು.

ಡಿಸೆಂಬರ್ 6ರಂದು ಓಡಿಶಾ ಮೂಲದ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೇಡ್ ಕಂಪನಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಇಲ್ಲಿಯವರೆಗೆ ಸುಮಾರು ₹351 ಕೋಟಿಗೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲಿಯೂ ಅಧಿಕಾರಿಗಳು ದಾಳಿ ನಡೆಸಿದ್ದು, ಸಾಹು ಮನೆಯಿಂದ ಎಷ್ಟು ಪ್ರಮಾಣದ ನಗದು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.