ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ 14ನೇ ಮುಖ್ಯಮಂತ್ರಿಯಾಗಿ 2001ರ ಅಕ್ಟೋಬರ್ 7ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಅದರ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್ 7ರಿಂದ 'ವಿಕಾಸ ಸಪ್ತಾಹ' ಅಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಋಷಿಕೇಶ್ ಪಟೇಲ್ ಭಾನುವಾರ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಕ್ಟೋಬರ್ 7 ರಿಂದ 15ರ ವರೆಗೆ ವಿಕಾಸ ಸಪ್ತಾಹ ಆಯೋಜಿಸುವ ಸಂಬಂಧ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2005ರ ಏಪ್ರಿಲ್ 1ಕ್ಕೂ ಮುನ್ನ ಸ್ಥಿರ ವೇತನದ ಆಧಾರದಲ್ಲಿ ನೇಮಕಗೊಂಡಿರುವ ಸುಮಾರು 60,000ಕ್ಕೂ ಅಧಿಕ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆ (ಒಪಿಎಸ್) ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸಂಪುಟ ಸಭೆ ನಿರ್ಧರಿಸಿದೆ ಎಂದಿದ್ದಾರೆ.

'ವಿಕಾಸ ಸಪ್ತಾಹ'ದ ವೇಳೆ ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ. ಕಳೆದ 23 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಸಾಧನೆಗಳ ಪ್ರತೀಕವಾಗಿ, ಏಕತಾ ಪ್ರತಿಮೆ, ಸೂರತ್ ಡೈಮಂಡ್ ಮಾರುಕಟ್ಟೆ ಸೇರಿದಂತೆ ರಾಜ್ಯದ 23 ಸ್ಥಳಗಳಲ್ಲಿ 'ವಿಕಾಸ ನಡಿಗೆ' ಆಯೋಜಿಸಲಾಗುತ್ತದೆ ಎಂದೂ ಸಚಿವ ಹೇಳಿದ್ದಾರೆ.

'ಮೋದಿ ಅವರ ಉತ್ತಮ ಆಡಳಿತದ ಯಶಸ್ಸು, ಬಹು ಆಯಾಮದ ಅಭಿವೃದ್ಧಿ ಪಯಣವನ್ನು ಸಂಭ್ರಮಿಸಲು ಮತ್ತು ಜಗತ್ತಿಗೆ ಸಾರಲು ರಾಜ್ಯದಲ್ಲಿ ಪ್ರತಿ ವರ್ಷ 'ವಿಕಾಸ ಸಪ್ತಾಹ' ಆಚರಿಸಲಾಗುವುದು' ಎಂದು ಪಟೇಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.