ನವದೆಹಲಿ: ಭಾರತ– ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) 15ನೇ ಗಸ್ತು (ಪಿಪಿ –15) ತಾಣದಿಂದ ಉಭಯ ದೇಶಗಳು ಸೇನೆಯನ್ನೇನೋ ವಾಪಸ್ ಕರೆಸಿಕೊಂಡಿವೆ. ಆದರೆ ಇದರಿಂದ ಭಾರತವು ತನ್ನ ಪ್ರದೇಶದಲ್ಲಿ ನಿರ್ಮಿಸಿಕೊಳ್ಳಬಹುದಾದ ‘ಬಫರ್ ವಲಯ’ವನ್ನು ಕೊನೆಗಾಣಿಸಿದಂತಾಗಿದೆ ಎಂದು ‘ಲಡಾಕ್ ಅಟಾನಮಸ್ ಹಿಲ್ ಡೆವೆಲಪ್‌ಮೆಂಟ್ ಕೌನ್ಸಿಲ್’ (ಎಲ್‌ಎಎಚ್‌ಡಿಸಿ) ಆರೋಪಿಸಿದೆ.

ಭಾರತವು ಪಿಪಿ–15ರ ಜತೆಗೆ ಕರಂ ಸಿಂಗ್ ಬೆಟ್ಟದ ಪಿಪಿ–16 ಗಸ್ತು ಪ್ರದೇಶದಿಂದಲೂ ಸೇನೆಯನ್ನು ಹಿಂಪಡೆಯಲು ಒಪ್ಪಿಗೆ ನೀಡಿದೆ ಎಂದು ಎಲ್‌ಎಎಚ್‌ಡಿಸಿ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಪ್ರತಿಕ್ರಿಯಿಸಿದ್ದಾರೆ.

ದಶಕಗಳಿಂದ ಸೇನೆಯನ್ನು ನಿಯೋಜಿಸಿರುವಭಾರತ ಪಿಪಿ–16ರಲ್ಲಿ ತನ್ನ ಸೇನಾ ಪಡೆಯನ್ನು ವಾಪಸ್ ತೆಗೆದುಕೊಂಡರೆ, ಇಲ್ಲಿನ ಕ್ರುಗಾಂಗ್ ಕಣಿವೆಯು ವಿವಾದಿತ ಪ್ರದೇಶವಾಗಿ ಪರಿವರ್ತಿತವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಜನರು ದನ, ಕರುಗಳನ್ನು ಮೇಯಿಸಲುಈ ಪ್ರದೇಶವನ್ನು ಬಳಸುತ್ತಿರುವುದರಿಂದ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತವು ತನ್ನ ಈ ಭೂಪ್ರದೇಶವನ್ನು ಕಳೆದುಕೊಳ್ಳುವುದು ಈ ಕ್ಷೇತ್ರದ ಜನಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ‘ಚೀನಾವು ಭಾರತದ ನೆಲದಿಂದ ಹಿಂದೆ ಸರಿದಿದೆ ಮತ್ತು ಭಾರತವು ತನ್ನದೇ ನೆಲದಿಂದ ಹಿಂದೆ ಸರಿದಿದೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.