ನವದೆಹಲಿ: 2023ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಜಗತ್ತಿನ 180 ದೇಶಗಳ ಪೈಕಿ ಭಾರತವು 93ನೇ ಸ್ಥಾನ ಪಡೆದಿದೆ ಎಂದು ‘ಟ್ರಾನ್ರ್ಪರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆ’ಯ ವರದಿ ತಿಳಿಸಿದೆ.

ಒಟ್ಟು 100 ಅಂಕಗಳ ಪೈಕಿ ಭಾರತವು ಒಟ್ಟಾರೆ 2023ರಲ್ಲಿ 40 ಅಂಕ ಪಡೆದಿದೆ. 2022ರಲ್ಲಿ ಭಾರತ 39 ಅಂಕಗಳೊಂದಿಗೆ 85ನೇ ರ್ಯಾಂಕ್ ಪಡೆದಿತ್ತು.

ತಜ್ಞರು ಮತ್ತು ಉದ್ದಿಮೆದಾರರು ಕಂಡಂತೆ 180 ದೇಶಗಳ ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಕೆಯ ಮಟ್ಟವನ್ನು ಸೂಚ್ಯಂಕವು ತಿಳಿಸುತ್ತದೆ. ಸೂಚ್ಯಂಕದಲ್ಲಿ ಸೊನ್ನೆಯಿಂದ 100 ರವರೆಗಿನ ಮಾಪನವನ್ನು ಬಳಸಲಾಗಿದ್ದು, ಸೊನ್ನೆ ಅಂಕ ಪಡೆದ ದೇಶ ಅತ್ಯಂತ ಭ್ರಷ್ಟ ಎಂದು, 100 ಅಂಕ ಪಡೆದ ರಾಷ್ಟ್ರ ಭ್ರಷ್ಟಾಚಾರರಹಿತವೆಂದು ಹೇಳಲಾಗುತ್ತದೆ.

ಭಾರತದ ಅಂಕಗಳಲ್ಲಿ ಸಣ್ಣ ಪ್ರಮಾಣದ ಏರಿಳಿತ ಕಂಡುಬಂದಿದ್ದು, ಮಹತ್ವದ ಬದಲಾವಣೆಯ ಬಗ್ಗೆ ಯಾವ ತೀರ್ಮಾನಕ್ಕೂ ಬರಲಾಗುತ್ತಿಲ್ಲ. ಆದರೂ, ದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ದೂರಸಂಪರ್ಕ ಮಸೂದೆಯಂಥ ಕ್ರಮಗಳ ಮೂಲಕ ಜನರ ಮೂಲಭೂತ ಹಕ್ಕುಗಳಿಗೆ ಬೆದರಿಕೆಯೊಡ್ಡಿ ಮುಕ್ತ ವಾತಾವರಣಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ದಕ್ಷಿಣ ಏಷ್ಯಾದ ರಾಷ್ಟ್ರಗಳ ಪೈಕಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಮ್ಮ ರಾಜಕೀಯ ಅಸ್ಥಿರತೆ ಮತ್ತು ಸಾಲದ ಕಾರಣದಿಂದಾಗಿ ಕ್ರಮವಾಗಿ 133 ಮತ್ತು 115ನೇ ಸ್ಥಾನ ಪಡೆದಿವೆ. ಬಾಂಗ್ಲಾ ದೇಶ 149 ಸ್ಥಾನ ಪಡೆದಿದ್ದರೆ, 37 ಲಕ್ಷ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಸುದ್ದಿಯಾಗಿದ್ದ ಚೀನಾ 76ನೇ ಸ್ಥಾನ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.