ಬೆಂಗಳೂರು: 2014ರಲ್ಲಿಆಗಷ್ಟೇ ಹೊಸದಾಗಿ ಪ್ರಧಾನಿ ಪಟ್ಟಕ್ಕೇರಿದ್ದ ನರೇಂದ್ರ ಮೋದಿ ಅವರು ಇನ್ನೈದು ವರ್ಷಗಳಲ್ಲಿ... ಅಂದರೆ, 2019ರ ಅ.2ರ ಹೊತ್ತಿಗೆ ದೇಶವನ್ನು ‘ಸ್ವಚ್ಛ ಭಾರತ’ ಮಾಡುವುದಾಗಿಯೂ, ಬಯಲು ಶೌಚ ಮುಕ್ತವಾಗಿಸುವುದಾಗಿಯೂ ವಾಗ್ದಾನ ನೀಡಿದ್ದರು. ಅದರಂತೆ, ನಿನ್ನೆ ಗಾಂಧಿ ಜಯಂತಿಯ ದಿನ ಸಬರಮತಿ ಆಶ್ರಮದಲ್ಲಿ ದೇಶವನ್ನುದ್ದೇಶಿ ಭಾಷಣ ಮಾಡಿರುವ ಪ್ರಧಾನಿ, ’ದೇಶ ಬಯಲು ಶೌಚ ಮುಕ್ತವಾಗಿದೆ,‘ ಎಂದು ಘೋಷಿಸಿದ್ದಾರೆ.

‘ಭಾರತ ಈಗ ಬಯಲು ಶೌಚಮುಕ್ತ ರಾಷ್ಟ್ರವಾಗಿದೆ. ‘ನಮ್ಮದು ಬಯಲುಶೌಚಮುಕ್ತ ಗ್ರಾಮ’ ಎಂದು ಭಾರತದ ಗ್ರಾಮಗಳು ತಾವಾಗಿಯೇ ಘೋಷಿಸಿಕೊಂಡಿವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮತ್ತು ಸ್ವಚ್ಛತೆಯ ಪ್ರತೀಕವಾಗಿದ್ದ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಸಂದರ್ಭದಲ್ಲಿ ಇದು ಸಾಧ್ಯವಾಗಿರುವುದು ಹೆಮ್ಮೆಯ ವಿಚಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.

ದೇಶ ಬಯಲು ಶೌಚ ಮುಕ್ತಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇನೋ ಘೋಷಣೆ ಮಾಡಿದ್ದಾರೆ. ಆದರೆ, ದೇಶದಲ್ಲಿ ಈ ಸಮಸ್ಯೆ ಇನ್ನೂ ಜೀವಂತವಾಗಿದೆ ಎನ್ನುತ್ತವೆ ಸರ್ಕಾರದ ಅಂಕಿ ಅಂಶಗಳು ಮತ್ತು ವರದಿಗಳು.

ದೇಶವು ಶೇ 100ರಷ್ಟು ಪ್ರಮಾಣದಲ್ಲಿ ‘ಬಯಲು ಶೌಚ ಮುಕ್ತ’ವಾಗಿಲ್ಲ ಎಂದು ಕೇಂದ್ರ ಸರ್ಕಾರದ್ದೇ ದತ್ತಾಂಶಗಳು ಮತ್ತು ಸಮೀಕ್ಷಾ ವರದಿಗಳು ಹೇಳುತ್ತವೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ‘ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ: 2018–19’ರ (ಎನ್ಎಆರ್ಎಸ್ಎಸ್) ವರದಿಯೂ ಇದನ್ನೇ ದೃಢಪಡಿಸುತ್ತದೆ. ಆದರೆ ಸ್ವಚ್ಛಭಾರತ ಅಭಿಯಾನದ ಜಾಲತಾಣದಲ್ಲಿ ಇರುವ ದತ್ತಾಂಶಗಳಿಗೂ, ಈ ವರದಿಯಲ್ಲಿ ಪತ್ತೆಯಾದ ಅಂಶಗಳಿಗೂ ವ್ಯತ್ಯಾಸವಿದೆ.

ಎನ್ಎಆರ್ಎಸ್ಎಸ್ ವರದಿ

ಸ್ವಚ್ಛ ಭಾರತ ಅಭಿಯಾನದ ಜಾಲತಾಣದಲ್ಲಿನ ದತ್ತಾಂಶಗಳನ್ನು ಮರುಪರಿಶೀಲಿಸುವ ಉದ್ದೇಶದಿಂದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಈ ಸಮೀಕ್ಷೆಯನ್ನು ನಡೆಸಿತ್ತು. ಮೂರು ಸ್ವಯಂಸೇವಾ ಸಂಸ್ಥೆಗಳು ಸರ್ಕಾರದ ಪರವಾಗಿ ಈ ಸಮೀಕ್ಷೆಯನ್ನು ನಡೆಸಿದ್ದವು.

* 2018ರ ನವೆಂಬರ್ನಿಂದ 2019ರ ಫೆಬ್ರುವರಿ ಅಂತ್ಯದವರೆಗೆ ಸಮೀಕ್ಷೆ ನಡೆಸಲಾಗಿತ್ತು

* ಇದೇ ಅವಧಿಯಲ್ಲಿ ಸ್ವಚ್ಛ ಭಾರತ ಅಭಿಯಾನದ ಜಾಲತಾಣದಲ್ಲಿ ಪ್ರಕಟವಾದ/ಲಭ್ಯವಿದ್ದ ದತ್ತಾಂಶಗಳಿಗೂ ಮತ್ತು ಸಮೀಕ್ಷೆ ವೇಳೆ ಪತ್ತೆಯಾದ ದತ್ತಾಂಶಗಳಿಗೂ ಭಾರಿ ವ್ಯತ್ಯಾಸವಿತ್ತು

* 93.1 % ರಷ್ಟು ಕುಟುಂಬಗಳಿಗೆ ಮಾತ್ರ ಶೌಚಾಲಯದ ಲಭ್ಯತೆ ಇದೆ (ಆದರೆ ಸ್ವಚ್ಛ ಭಾರತ ಅಭಿಯಾನದ ಜಾಲತಾಣದಲ್ಲಿ ಈ ಪ್ರಮಾಣ ಶೇ 96ರಷ್ಟು ಎಂದು ತೋರಿಸಲಾಗಿತ್ತು)

* 96.5 % ರಷ್ಟು ಜನರು ಮಾತ್ರ ತಮ್ಮ ಮನೆಯಲ್ಲಿರುವ ಶೌಚಾಲಯ ಬಳಸುತ್ತಾರೆ

* 3.5 % ರಷ್ಟು ಜನರು ಶೌಚಾಲಯವಿದ್ದರೂ, ವಿವಿಧ ಕಾರಣಗಳಿಂದ ಅವನ್ನು ಬಳಸುತ್ತಿಲ್ಲ

* 90.7 %: ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದ್ದ ಗ್ರಾಮಗಳಲ್ಲಿ ನಿಜವಾಗಿಯೂ ‘ಬಯಲು ಶೌಚ ಮುಕ್ತ’ವಾಗಿದ್ದ ಗ್ರಾಮಗಳ ಪ್ರಮಾಣ

* 9.3 %: ಬಯಲು ಶೌಚ ಮುಕ್ತವಾಗದೇ ಇದ್ದರೂ, ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿರುವ ಗ್ರಾಮಗಳು

* 44 %: ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ಶೌಚಾಲಯವಿದ್ದರೂ ಅವುಗಳನ್ನು ಬಳಸದೇ ಇರುವವರ ಪ್ರಮಾಣ (ರೈಸ್ ಸಮೀಕ್ಷಾ ವರದಿಯಲ್ಲಿ ಉಲ್ಲೇಖ)

ಬಯಲು ಶೌಚ ಮುಕ್ತವಲ್ಲದ ಗ್ರಾಮಗಳ ಚಿತ್ರಣ

1. ಗ್ರಾಮದ ಎಲ್ಲಾ ಮನೆಗಳಲ್ಲೂ ಶೌಚಾಲಯ ಇಲ್ಲ

2. ಶೌಚಾಲಯಗಳಿದ್ದರೂ, ಅವುಗಳ ನಿರ್ಮಾಣ ಅವೈಜ್ಞಾನಿಕವಾಗಿಕ ಇವೆ. ಬಳಕೆಗೆ ಯೋಗ್ಯವಾಗಿಲ್ಲದೇ ಇವೆ

3. ಶೌಚಾಲಯವಿದ್ದರೂ, ಬಳಕೆ ಇಲ್ಲ

4. ಗ್ರಾಮದ ಶಾಲೆ– ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳಿಲ್ಲ

5. ಗ್ರಾಮದಲ್ಲಿ, ಗ್ರಾಮದ ಹೊರವಲಯದಲ್ಲಿ ಮಾನವ ತ್ಯಾಜ್ಯ ಇದ್ದೇ ಇದೆ

ಆಧಾರ: ರಾಯಿಟರ್ಸ್, ಪಿಟಿಐ, ಎಎಫ್ಪಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ

2014ರಲ್ಲಿ ಏನು ಹೇಳಿದ್ದರು ಮೋದಿ

2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ನವದೆಹಲಿಯ ರಾಜಪಥದಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ನರೇಂದ್ರ ಮೋದಿ ಅವರು, ’ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಕ್ಕೆ ಭಾರತ ಸಲ್ಲಿಸಬಹುದಾದ ಗೌರವವೆಂದರೆ ಅದು ಸ್ವಚ್ಛ ಭಾರತ,’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.