ನವದೆಹಲಿ: ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆ ಸಿದ್ಧಪಡಿಸಿರುವ 2022ನೇ ಸಾಲಿನ 180 ರಾಷ್ಟ್ರಗಳ ‘ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಭಾರತ 150ನೇ ಸ್ಥಾನಪಡೆದಿದೆ. ಕಳೆದ ಬಾರಿ 142ನೇ ಸ್ಥಾನದಲ್ಲಿದ್ದ ಭಾರತ, ಈ ಬಾರಿ ಎಂಟು ಸ್ಥಾನಗಳ ಕುಸಿತ ಕಂಡಿದೆ.

ನೇಪಾಳ ಹೊರತುಪಡಿಸಿ ಭಾರತದ ನೆರೆಯ ರಾಷ್ಟ್ರಗಳ ಶ್ರೇಯಾಂಕದಲ್ಲೂ ಕುಸಿತ ದಾಖಲಾಗಿದೆ. ಶ್ರೀಲಂಕಾ 146,ಪಾಕಿಸ್ತಾನ 157, ಬಾಂಗ್ಲಾದೇಶ 162 ಹಾಗೂ ಮ್ಯಾನ್ಮಾರ್ 176ನೇ ಸ್ಥಾನದಲ್ಲಿವೆ ಎಂದು ಸಂಸ್ಥೆಯು ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ಬಾರಿ 106ನೇ ಸ್ಥಾನದಲ್ಲಿದ್ದ ನೇಪಾಳ ಈ ಬಾರಿ 76ನೇ ಸ್ಥಾನಕ್ಕೆ ಏರಿದೆ. ಕಳೆದ ಬಾರಿ ಶ್ರೀಲಂಕಾ 127, ಮ್ಯಾನ್ಮಾರ್ 140, ಪಾಕಿಸ್ತಾನ 145, ಬಾಂಗ್ಲಾದೇಶ 152ನೇ ಸ್ಥಾನದಲ್ಲಿದ್ದವು.

ಈ ವರ್ಷ, ನಾರ್ವೆ (1) ಡೆನ್ಮಾರ್ಕ್ (2), ಸ್ವೀಡನ್ (3) ಎಸ್ಟೋನಿಯಾ (4) ಮತ್ತು ಫಿನ್ಲೆಂಡ್ (5) ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದು, ಉತ್ತರ ಕೊರಿಯಾ ಕೊನೆಯ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.