ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಧ್ಯಮ–ಮನರಂಜನೆ ಜಾಗತಿಕ ಸಮಾವೇಶ ನವೆಂಬರ್‌ನಲ್ಲಿ ಆಯೋಜಿಸುತ್ತಿದೆ ಭಾರತ– ವೈಷ್ಣವ್

Published 13 ಜುಲೈ 2024, 10:56 IST
Last Updated 13 ಜುಲೈ 2024, 10:56 IST
ಅಕ್ಷರ ಗಾತ್ರ

ನವದೆಹಲಿ: ಬರುವ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದ ಸಂದರ್ಭದಲ್ಲೇ ಜಾಗತಿಕ ಆಡಿಯೊ ವಿಷುಯಲ್ ಹಾಗೂ ಮನರಂಜನಾ ಶೃಂಗವನ್ನು (WAVES) ಆಯೋಜಿಸಲಾಗುತ್ತಿದೆ. ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ ಭೌತಿಕ ಹಕ್ಕನ್ನು ಕಾಪಾಡುವ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಭರವಸೆ ನೀಡಿದ್ದಾರೆ.

ವೈಷ್ಣವ್ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ನ. 20ರಿಂದ 24ರವರೆಗೆ ಈ ಶೃಂಗಸಭೆ ಆಯೋಜನೆಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಭಾರತ ನಿರ್ದಿಷ್ಟ ಸ್ಥಾನವನ್ನು ಹೊಂದುವ ನಿಟ್ಟಿನಲ್ಲಿ ಈ ಶೃಂಗವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಐಪಿ ಹಕ್ಕುಗಳು ಸಾಕಷ್ಟು ಮೌಲ್ಯಗಳನ್ನು ಹೊಂದಿದೆ. ಈ ಐಪಿ ಹಕ್ಕುಗಳನ್ನು ಕಾಪಾಡುವ ಪರಿಸರವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಯೋಜನೆ ಇದೆ. ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ ವೆಂಚರ್ ಕ್ಯಾಪಿಟಲ್ ಮಾದರಿಯನ್ನು ಅಳವಡಿಸುವತ್ತಲೂ ಚರ್ಚಿಸಲಾಗುವುದು’ ಎಂದಿದ್ದಾರೆ.

ಪ್ರಮೋದ್ ಸಾವಂತ್ ಮಾತನಾಡಿ, ‘2023ರಲ್ಲಿ ಒಟಿಟಿ ವೇದಿಕೆಯಲ್ಲಿ ಸುಮಾರು 3 ಸಾವಿರ ಗಂಟೆಗಳ ಕಾರ್ಯಕ್ರಮವನ್ನು ನಾವು ನಿರ್ಮಿಸಿದ್ದೇವೆ. ಹಿಗಾಗಿ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಸಹಯೋಗ, ಸಂಪರ್ಕಜಾಲ ಬೆಳೆಸುವುದು ಹಾಗೂ ಬೆಳವಣಿಗೆ ಕಾಣುವ ಹೊಸ ಆಯಾಮದತ್ತ ನಾವು ಯೋಜನೆ ರೂಪಿಸಬೇಕಿದೆ’ ಎಂದಿದ್ದಾರೆ.

ಗೋವಾದಲ್ಲಿ ನ. 20ರಿಂದ 28ರವರೆಗೆ ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವು ನಡೆಯಲಿದೆ. ಈ ಅವಧಿಯಲ್ಲೇ ಈ ಶೃಂಗಸಭೆ ಆಯೋಜಿಸಲಾಗುವುದು. ಭಾರತದಲ್ಲಿನ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಒಟ್ಟು 27.5 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಹೂಡಿಕೆಯಾಗಿದೆ. ಈ ಕ್ಷೇತ್ರದ ಮೂಲಕ ಜಾಗತಿಕ ಮಟ್ಟದಲ್ಲಿರುವ ಕ್ಷೇತ್ರದ ಪರಿಣಿತರೊಂದಿಗೆ ಒಡಂಬಡಿಕೆ ಮೂಲಕ ಹೊಸ ವಿಚಾರಗಳ ಮಾಹಿತಿ ಹಾಗೂ ಅರ್ಥಗರ್ಭಿತ ಚರ್ಚೆಗಳು ನಡೆಯಲು ಸಾಧ್ಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT