ನವದೆಹಲಿ: ‘ಭಾರತದ ಸಂವಿಧಾನ ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿದೆ. ಅದು ಪ್ರಗತಿಶೀಲ ದಾಖಲೆಯೂ ಆಗಿದೆ. ಇಂತಹ ಶ್ರೇಷ್ಠ ಸಂವಿಧಾನದ ಮೂಲಕ ನಾವು ಸಾಮಾಜಿಕ ನ್ಯಾಯ, ಎಲ್ಲರನ್ನು ಒಳಗೊಳ್ಳುವಿಕೆಯಂತಹ ಗುರಿಗಳನ್ನು ಸಾಧಿಸಿದ್ದೇವೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಹೇಳಿದ್ದಾರೆ.

‘ಸಂವಿಧಾನ ರಚನೆಕಾರರು ದೂರದೃಷ್ಟಿ ಉಳ್ಳವರಾಗಿದ್ದರು. ಬದಲಾಗುವ ಸಮಯ ಹಾಗೂ ಅಗತ್ಯಗಳಿಗೆ ತಕ್ಕಂತೆ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುವುದಕ್ಕೆ ವ್ಯವಸ್ಥೆಯನ್ನೂ ಕೂಡ ರೂಪಿಸಿದ್ದಾರೆ’ ಎಂದು ರಾಷ್ಟ್ರಪತಿ ಮುರ್ಮು ಹೇಳಿದರು.

ಸಂವಿಧಾನವನ್ನು ಅಂಗೀಕರಿಸಿರುವುದಕ್ಕೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಂಸತ್ ಭವನದ ‘ಸಂವಿಧಾನ ಸದನ’ದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಧೇಶಿಸಿ ಅವರು ಮಾತನಾಡಿದರು.

‘ಜನಸಾಮಾನ್ಯರ ಜೀವನ ಗುಣಮಟ್ಟ ಸುಧಾರಿಸುವುದಕ್ಕಾಗಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಒಟ್ಟಾಗಿ ಕಾರ್ಯನಿರ್ವಹಿಸುವುದು ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಜವಾಬ್ದಾರಿ’ ಎಂದು ಹೇಳಿದರು.

‘ಭಾರತವು ಅಳವಡಿಸಿಕೊಂಡಿರುವ ಹೊಸ ವಿಧಾನಗಳಿಂದಾಗಿ ಜಾಗತಿಕವಾಗಿ ನಾವು ಹೊಸ ಅನನ್ಯತೆ ಪಡೆಯುತ್ತಿದ್ದೇವೆ. ಅಂತರರಾಷ್ಟ್ರೀಯವಾಗಿ ಶಾಂತಿ ಮತ್ತು ಸುರಕ್ಷತೆ ಖಾತ್ರಿಪಡಿಸಲು ಮಹತ್ವದ ಪಾತ್ರ ವಹಿಸುವಂತೆ ಸಂವಿಧಾನ ರಚನಾಕಾರರು ಭಾರತಕ್ಕೆ ನಿರ್ದೇಶನವನ್ನು ಕೂಡ ನೀಡಿದ್ದಾರೆ’ ಎಂದರು.

‘ಅನೇಕ ವಿದ್ವಾಂಸರು ಮೂರು ವರ್ಷಗಳ ಕಾಲ ನಡೆಸಿದ ಸಮಾಲೋಚನೆಯ ಫಲವೇ ನಮ್ಮ ಸಂವಿಧಾನ. ನಿಜಾರ್ಥದಲ್ಲಿ, ಇದು ಸುದೀರ್ಘವಾಗಿ ನಡೆದ ಸ್ವಾತಂತ್ರ್ಯ ಹೋರಾಟದ ಫಲವೂ ಆಗಿದೆ’ ಎಂದು ಹೇಳಿದರು.

ರಾಷ್ಟ್ರಪತಿ ಮುರ್ಮು ಹೇಳಿದ್ದು

ಸ್ವಾತಂತ್ರ್ಯ ಗಳಿಸಿದ್ದ ದೇಶಕ್ಕೆ ಸಂವಿಧಾನ ರಚನೆಯ ಮಹತ್ಕಾರ್ಯ ಸಾಧಿಸಿದಕ್ಕೆ 75 ವರ್ಷಗಳ ಹಿಂದೆ ಇದೇ ದಿನ (ನ.26) ‘ಸಂವಿಧಾನ ಸದನ’ದ ಸೆಂಟ್ರಲ್ ಹಾಲ್ ಸಾಕ್ಷಿಯಾಗಿತ್ತು.

ನ್ಯಾಯ ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವದಂತಹ ಮೌಲ್ಯಗಳು ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿವೆ. ಇವು ಅನಾದಿ ಕಾಲದಿಂದಲೂ ಭಾರತೀಯರು ಅನುಸರಿಸುತ್ತಿರುವ ವಿಚಾರಗಳೇ ಆಗಿವೆ

ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ದೇಶದ ಏಕತೆ ಸಮಗ್ರತೆ ಕಾಪಾಡುವುದು ಸೌಹಾರ್ದ ಕಾಪಾಡುವುದು ಹಾಗೂ ಮಹಿಳೆಯರ ಘನತೆ ರಕ್ಷಣೆಯನ್ನು ಖಾತ್ರಿಪಡಿಸಲಾಗಿದೆ

ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖವಾಗಿರುವ ಆದರ್ಶಗಳು ಒಂದಕ್ಕೊಂದು ಪೂರಕವಾಗಿವೆ. ಇವು ಭಾರತದ ಪ್ರತಿಯೊಬ್ಬ ಪ್ರಜೆ ಪ್ರಗತಿ ಹೊಂದಿ ಸಮಾಜಕ್ಕೆ ಕೊಡುಗೆ ನೀಡುವುದಕ್ಕೆ ಅವಕಾಶ ಒದಗಿಸುವಂತಹ ವಾತಾವರಣವನ್ನು ಸೃಷ್ಟಿಸುತ್ತವೆ

ಕಾರ್ಯಾಂಗ ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಮೂಲಕ ನಮ್ಮ ಸಾಂವಿಧಾನಿಕ ಆದರ್ಶಗಳು ಗಟ್ಟಿಗೊಳ್ಳುತ್ತವೆ

ಸಂಸತ್ ರೂಪಿಸಿದ ಹಲವಾರು ಶಾಸನಗಳು ಜನರ ಆಶೋತ್ತರಗಳನ್ನು ಈಡೇರಿಸಿವೆ

ಸಮಾಜದಲ್ಲಿರುವ ದುರ್ಬಲ ವರ್ಗಗಳ ಏಳಿಗೆಗೆ ಕಳೆದ ಕೆಲ ವರ್ಷಗಳಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇವು ಜನರ ಜೀವನ ಗುಣಮಟ್ಟ ಸುಧಾರಿಸಿವೆ ಹಾಗೂ ಅವರ ಏಳಿಗೆಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಿವೆ

ಮಹಿಳಾ ಮೀಸಲಾತಿ ಕುರಿತ ಕಾನೂನು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣದಲ್ಲಿ ಹೊಸ ಶಕೆ ಆರಂಭಕ್ಕೆ ದಾರಿ ಮಾಡಿಕೊಟ್ಟಿದೆ

ಧರ್ಮಕ್ಕೇ ಮಹತ್ವ ನೀಡಿದರೆ ಸ್ವಾತಂತ್ರ್ಯಕ್ಕೆ ಅಪಾಯ: ಧನಕರ್

‘ರಾಜಕೀಯ ಪಕ್ಷಗಳು ದೇಶಕ್ಕಿಂತಲೂ ಧರ್ಮಕ್ಕೆ ಹೆಚ್ಚು ಮಹತ್ವ ನೀಡಿದಲ್ಲಿ ನಮ್ಮ ಸ್ವಾತಂತ್ರ್ಯಕ್ಕೆ ಮತ್ತೊಮ್ಮೆ ಅಪಾಯ ತಪ್ಪಿದ್ದಲ್ಲ ಎಂಬುದಾಗಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು’ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಂಗಳವಾರ ಹೇಳಿದರು. ‘ಸಂವಿಧಾನ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪ್ರತಿಯೊಂದಕ್ಕೂ ಅಡಚಣೆ ಉಂಟು ಮಾಡುವುದೇ ಕಾರ್ಯತಂತ್ರವನ್ನಾಗಿ ಮಾಡಿಕೊಂಡಲ್ಲಿ ಅದು ಪ್ರಜಾತಾಂತ್ರಿಕ ಸಂಸ್ಥೆಗಳಿಗೆ ಅಪಾಯ ಒಡ್ಡಲಿದೆ’ ಎಂದು ಎಚ್ಚರಿಸಿದರು. ‘ರಚನಾತ್ಮಕ ಮಾತುಕತೆ ಚರ್ಚೆ ಅರ್ಥಪೂರ್ಣ ಸಂವಾದದ ಮೂಲಕ ತಮ್ಮ ಪ್ರಜಾತಾಂತ್ರಿಕ ಸಂಸ್ಥೆಗಳ ಪಾವಿತ್ರ್ಯ ಮರುಸ್ಥಾಪಿಸುವುದು ಹಾಗೂ ಪರಿಣಾಮಕಾರಿ ಜನಸೇವೆ ಮಾಡುವ ಸಮಯ ಬಂದಿದೆ’ ಎಂದರು. ‘‘ಭಾರತದ ಪ್ರಜೆಗಳಾದ ನಾವು..’ ಎಂಬ ಪ್ರಸ್ತಾವನೆಯ ಆರಂಭಿಕ ಸಾಲುಗಳು ಆಳ ಅರ್ಥ ಹೊಂದಿವೆ. ದೇಶದ ಪ್ರಜೆಗಳ ಕೈಯಲ್ಲಿಯೇ ಅಂತಿಮ ಅಧಿಕಾರವಿದೆ. ಸಂಸತ್ ಎಂಬುದು ಜನರಿಗೆ ದನಿಯಾಗಬೇಕು ಎಂಬ ವಿಶಾಲ ಅರ್ಥ ಅಡಕವಾಗಿದೆ’ ಎಂದು ಧನಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.