ಕೊಚ್ಚಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್, ತನ್ನ ವೈದ್ಯಕೀಯೇತರ ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡಲು ತರಬೇತಿಯನ್ನು ನೀಡುತ್ತಿದೆ.

‘ಕೋವಿಡ್ ಪಿಡುಗಿನಿಂದ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ನೌಕಾಪಡೆಯ ವೈದ್ಯಕೀಯೇತರ ಸಿಬ್ಬಂದಿಗೆ ಐಎನ್‌ಎಸ್ ವೆಂದುರಥಿಯಲ್ಲಿ ಬ್ಯಾಟಲ್ ಫೀಲ್ಡ್ ನರ್ಸಿಂಗ್ ಅಸಿಸ್ಟೆಂಟ್(ಬಿಎಫ್‌ಎನ್‌ಎ) ತರಬೇತಿಯನ್ನು ನೀಡಲಾಗುತ್ತಿದೆ’ ಎಂದು ರಕ್ಷಣಾ ವಕ್ತಾರ ಮಂಗಳವಾರ ಟ್ವೀಟ್ ಮಾಡಿದ್ದಾರೆ.

‘ಪ್ರಸ್ತುತ ಬಿಎಫ್‌ಎನ್‌ಎ ತಂಡಕ್ಕಾಗಿ ಪ್ರತಿ ವಾರ 80 ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ತಂಡವು ಕೋವಿಡ್ ವಿರುದ್ಧ ಹೋರಾಡಲು ಜನರಿಗೆ ನೆರವಾಗಲಿದೆ. ಅವರಿಗೆ ನರ್ಸಿಂಗ್ ಸಂಬಂಧಿತ ತರಬೇತಿಯನ್ನು ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಕಳೆದ ವರ್ಷವೂ ನೌಕಾಪಡೆಯ ದಕ್ಷಿಣ ಕಮಾಂಡ್ ಬಿಎಫ್‌ಎನ್‌ಎ ತಂಡಕ್ಕೆ ತರಬೇತಿಯನ್ನು ನೀಡಲಾಗಿತ್ತು.ಈ ವೇಳೆ ಅವರಿಗೆ ಕೈ ಶುಚಿತ್ವ, ಪಿಪಿಇ ಕಿಟ್ ಧರಿಸುವಿಕೆ, ಜೈವಿಕ–ವೈದ್ಕಕೀಯ ತ್ಯಾಜ್ಯ ನಿರ್ವಹಣೆ ಸೇರಿದಂತೆ ಇತರೆ ವಿಷಯ ಕುರಿತಾಗಿ ಕಲಿಸಿ ಕೊಡಲಾಗುತ್ತದೆ.

ಇದನ್ನೂ ಓದಿ... ಮಹಾರಾಷ್ಟ್ರ: ಒಂದೇ ಆಂಬುಲೆನ್ಸ್ನಲ್ಲಿ ಚಿತಾಗಾರಕ್ಕೆ 22 ಕೋವಿಡ್ ಶವ ಸಾಗಾಟ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.