ಬೆಂಗಳೂರು:ಭಾರತೀಯ ರೈಲ್ವೆ ಇಲಾಖೆಯು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿಮುಂಚೂಣಿಯಲಿದ್ದು, ಪ್ರಯಾಣಿಕರ ಬಳಕೆಗೆವಿವಿಧ ಆ್ಯಪ್‌ಗಳನ್ನು ವಿನ್ಯಾಸ ಮಾಡುವ ಮೂಲಕರೈಲು ಪ್ರಯಾಣವನ್ನು ಮತ್ತಷ್ಟು ಆರಾಮಗೊಳಿಸಲು ರೈಲ್ವೆ ಇಲಾಖೆಮುಂದಾಗಿದೆ.

ಮುಂಗಡ ಟಿಕೆಟ್ ಕಾಯ್ದಿರಿಸಲು, ಟಿಕೆಟ್ ಖರೀದಿಸಲು, ಬೋಗಿ ಸ್ವಚ್ಛತೆ,ಪ್ರಯಾಣದ ಸಂಬಂಧ ಮಾಹಿತಿ, ರೈಲ್ವೆ ಆಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಆ್ಯಪ್‌ಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್, ಮೊಬೈಲ್‌ಫೋನ್‌ಗಳಲ್ಲಿ ಸುಲಭವಾಗಿ ಬಳಕೆ ಮಾಡುವಂತೆ ಆ್ಯಪ್‌ಗಳನ್ನು ವಿನ್ಯಾಸ ಮಾಡಲಾಗಿದೆ.

ರೈಲ್ವೆ ಇಲಾಖೆ ಸಿದ್ಧಪಡಿಸಿರುವ ಪ್ರಯಾಣಿಕ ಸ್ನೇಹಿ ಆ್ಯಪ್‌ಗಳು ಆ್ಯಂಡ್ರಾಯ್ಡ್ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿವೆ. ಗ್ರಾಹಕರು ಈ ಆ್ಯಪ್‌ಗಳನ್ನು ಗೂಗಲ್ ಪ್ಲೇಸ್ಟೋರ್ ಹಾಗುಆ್ಯಪಲ್‌ಸ್ಟೋರ್‌ನಲ್ಲಿಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಯುಟಿಎಸ್ (ಕಾಯ್ದಿರಿಸದ ಟಿಕೆಟ್ ಮಾರಾಟ ವ್ಯವಸ್ಥೆ) ಆ್ಯಪ್...

ಕಾಯ್ದಿರಿಸದ (ಅನ್‌ರಿಸರ್ವಡ್) ಟಿಕೆಟ್ ಪಡೆಯುವವರಿಗೂ ಆನ್‌ಲೈನ್ ಖರೀದಿ ಅವಕಾಶ ಇರುವ ಯುಟಿಎಸ್ ಆ್ಯಪ್ ಅನ್ನುನಾಲ್ಕು ತಿಂಗಳ ಹಿಂದೆ ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ಈ ಹಿಂದೆಐಆರ್‌ಸಿಟಿಸಿ ಆ್ಯಪ್‌ನಲ್ಲಿ ಕಾಯ್ದಿರಿಸಿದ ಟಿಕೆಟ್ ಬುಕ್ ಮಾಡುವ ಅವಕಾಶ ಮಾತ್ರ ಇತ್ತು.

ಈ ಆ್ಯಪ್ ಬಳಸಿ ನಿರ್ದಿಷ್ಟ ಸಂಚಾರದ ಟಿಕೆಟ್‌ಗಳು, ಉಪನಗರ ರೈಲುಗಳ ಸೀಸನ್ ಟಿಕೆಟ್‌ಗಳು (ಸಬ್ ಅರ್ಬನ್ ರೈಲ್ವೆ ಪಾಸ್‌ಗಳು), ಪ್ಲಾಟ್‌ಫಾರಂ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.

ಆ್ಯಪ್ ಬಳಕೆ: ಗೂಗಲ್ ಪ್ಲೇಸ್ಟೋರ್‌ನಲ್ಲಿ UTS ಆ್ಯಪ್ ಎಂದು ಟೈಪ್ ಮಾಡಿ ಆ್ಯಪ್ ಡೌನ್‌ಲೋಡ್‌ಮಾಡಿಕೊಳ್ಳಿ. ಮೊಬೈಲ್ ಸಂಖ್ಯೆ, ಆಧಾರ್ ಅಥವಾ ಯಾವುದೇ ಗುರುತಿನ ಪತ್ರದ ದಾಖಲಾತಿ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಿ. ಎಟಿಎಂ ಪಿನ್ ಮಾದರಿಯಲ್ಲಿ ನಾಲ್ಕು ಅಂಕಿಗಳ ಪಾಸ್‌ವರ್ಡ್ ಬರುತ್ತದೆ. ನಂತರ ಅದನ್ನು ನೀವು ಬದಲಿಸಬಹುದು. ರೈಲ್ ವ್ಯಾಲೆಟ್, ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್–ಕ್ರೆಡಿಟ್ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು.

ಟಿಕೆಟ್ ಖರೀದಿಗೆ ಪೇಪರ್‌ಲೆಸ್ ಮತ್ತು ಪೇಪರ್ ಟಿಕೆಟ್ ಎಂಬ ಎರಡು ಆಯ್ಕೆಗಳನ್ನು ಕೊಡಲಾಗಿದೆ. ಟಿಕೆಟ್ ಖರೀದಿಸಿದ ಮೂರು ತಾಸಿನ ಒಳಗೆ ಪ್ರಯಾಣ ಆರಂಭಿಸಬೇಕು. ಟಿಕೆಟ್ ಪರೀಕ್ಷಕರು ಕೇಳಿದಾಗ, ನಿಮ್ಮ ಮೊಬೈಲ್‌ನ ಯುಟಿಎಸ್ ಆ್ಯಪ್‌ನಲ್ಲಿ ‘show ticket’ ಮೂಲಕ ಟಿಕೆಟ್ ತೋರಿದರೆ ಸಾಕು. ಅದೇ ನಿಮ್ಮ ಪ್ರಯಾಣದ ಅಧಿಕೃತ ಟಿಕೆಟ್ ಆಗಿರುತ್ತದೆ.ಯುಟಿಎಸ್ ಆ್ಯಪ್ ಮೂಲಕ ಒಬ್ಬ ಪ್ರಯಾಣಿಕ ತಾನಿರುವ ಸ್ಥಳದಿಂದ 5 ಕಿ.ಮೀ ವ್ಯಾಪ್ತಿಯ ನಿಲ್ದಾಣಗಳಲ್ಲಿ ಏಕಕಾಲಕ್ಕೆ ಗರಿಷ್ಠ ನಾಲ್ಕು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಆಯಾ ಋತುವಿನ ಟಿಕೆಟ್ ಖರೀದಿಗೆ ಹಾಗೂ ಅವುಗಳ ನವೀಕರಣಕ್ಕೂ ಈ ಆ್ಯಪ್ ಬಳಸಬಹುದು. ಪ್ಲ್ಯಾಟ್‌ಫಾರ್ಮ್ ಟಿಕೆಟ್ ಖರೀದಿಗೆ ಹಾಗೂ ಖರೀದಿಸಿರುವ ಟಿಕೆಟ್‌ಗಳನ್ನು ರದ್ದುಪಡಿಸುವುದಕ್ಕೂ ಈ ಆ್ಯಪ್ ನೆರವಾಗುತ್ತದೆ.

ಆ್ಯಪ್:railways’ UTS app

ಪ್ರಯಾಣದ ಸಂಪೂರ್ಣ ಮಾಹಿತಿಗೆ ’ಹಿಂದ್ ರೇಲ್’ ಆ್ಯಪ್...

ಪ್ರಯಾಣದ ಕುರಿತ ಮಾಹಿತಿಗಾಗಿ ರೈಲ್ವೆಇಲಾಖೆಯು'ಹಿಂದ್ ರೇಲ್' ಎಂಬ ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.

ಪಿಎನ್‌ಆರ್ ಸ್ಟೇಟಸ್, ರೈಲು ವೇಳಾ ಪಟ್ಟಿ, ರೈಲು ಮಾರ್ಗ, ಸಂಚಾರ, ಟಿಕೆಟ್ ಬುಕ್ಕಿಂಗ್, ನಿರ್ಗಮನ, ಆಗಮನದ ಸಮಯ, ಟಿಕೆಟ್ ರದ್ದು, ಪ್ಲಾಟ್‌ಫಾರ್ಮ್ ಸಂಖ್ಯೆ, ರೈಲಿನ ರನ್ನಿಂಗ್ ಸ್ಟೇಟಸ್ ಸೇರಿದಂತೆ ಸಾರ್ವಜನಿಕರಿಗೆ ಅವಶ್ಯಕವಿರುವ ಎಲ್ಲ ಮಾಹಿತಿ ಇದರಲ್ಲಿ ಲಭ್ಯವಾಗಲಿದೆ.ರೈಲು ಮಾಹಿತಿ ಮಾತ್ರವಲ್ಲದೆ ಟ್ಯಾಕ್ಸಿ, ಹೊಟೇಲ್ ರೂಂ, ಟೂರ್ ಪ್ಯಾಕೇಜ್, ಇ–ಕೇಟರಿಂಗ್ ಸೇವೆಗಳನ್ನು ಬುಕ್ ಮಾಡಬಹುದಾಗಿದೆ.

ಆ್ಯಪ್ ಬಳಕೆ: ಗೂಗಲ್ ಪ್ಲೇಸ್ಟೋರ್‌ನಲ್ಲಿ ’ಹಿಂದ್ ರೇಲ್’ ಎಂದು ಟೈಪಿಸಿ ಆ್ಯಪ್ ಹುಡುಕಬಹುದು. ಮೊಬೈಲ್ ಸಂಖ್ಯೆ ಹಾಗೂ ಇ–ಮೇಲ್ ವಿಳಾಸ ನೀಡಿಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಳಕೆದಾರ ಸ್ನೇಹಿಯಾಗಿರುವ ಈ ಆ್ಯಪ್ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಸೇರಿಸಲಾಗುವುದು ರೈಲ್ವೆ ಇಲಾಖೆ ಹೇಳಿದೆ.

ಆ್ಯಪ್:IRCTC Hind Rail

ದೂರು ನೀಡಲು ಮದದ್ ಆ್ಯಪ್...

ರೈಲು ಪ್ರಯಾಣಿಕರು ದೂರುಗಳನ್ನು ದಾಖಲಿಸಲು ಇನ್ನು ಮುಂದೆ ಸಹಾಯವಾಣಿ ಅಥವಾ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಬೇಕಿಲ್ಲ! ಪ್ರಯಾಣಿಕರುದೂರಿಗಾಗಿ ಪ್ರತ್ಯೇಕ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ’ಮದದ್ ಆ್ಯಪ್’ (ಸಹಾಯ) ಎಂದು ಹೆಸರಿಡಲಾಗಿದೆ.

ಆಹಾರದ ಗುಣಮಟ್ಟ, ಶೌಚಾಲಯ, ಬೋಗಿ ಕೊಳಕಾಗಿರುವುದು, ಇನ್ನಿತರ ಅವ್ಯವಸ್ಥೆ ಬಗ್ಗೆಪ್ರಯಾಣಿಕರು ಈ ಆ್ಯಪ್ ಮೂಲಕ ದೂರು ದಾಖಲಿಸಬಹುದು. ಇಲ್ಲಿ ತುರ್ತು ಸೇವೆಗಳಿಗೂ ಮನವಿ ಸಲ್ಲಿಸಬಹುದು.

ಆ್ಯಪ್‌ಬಳಕೆ : ಬಳಕೆದಾರರು ಗೂಗಲ್ ಪ್ಲೇಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಸಮಸ್ಯೆಯ ವಿಡಿಯೊ, ಚಿತ್ರ ಸಮೇತ ಕಳುಹಿಸಬೇಕು. ‘ಮದದ್’ನಲ್ಲಿ ದಾಖಲಿಸಿದ ದೂರು ನೇರವಾಗಿ ಆಯಾ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ. ಕೈಗೊಳ್ಳಲಾದ ಕ್ರಮಗಳ ಕುರಿತು ತಕ್ಷಣಕ್ಕೆ ಮಾಹಿತಿ ಬರಲಿದೆ.

ದಾಖಲಾದ ದೂರು ಯಾವ ಹಂತದಲ್ಲಿದೆ ಹಾಗೂ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ಪ್ರಯಾಣಿಕರು ಟ್ರ್ಯಾಕ್ ಮಾಡಿತಿಳಿದುಕೊಳ್ಳಬಹುದು.

ಆ್ಯಪ್:'MADAD' app

ಸಿಬ್ಬಂದಿಯ ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ‘ವಿಜ್ಹಿಲ್‘ (VIGIL) ಆ್ಯಪ್...

ಇಲಾಖೆ ಸಿಬ್ಬಂದಿಯಭ್ರಷ್ಟಾಚಾರ ವಿರುದ್ಧ ದೂರು ನೀಡುವ ಸಲುವಾಗಿ ’ವಿಜ್ಹಿಲ್’ ಆ್ಯಪ್ ಅನ್ನು ನೈರುತ್ಯ ರೈಲ್ವೆ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇದು ಆ್ಯಂಡ್ರಾಯ್ಡ್‌ಮಾದರಿಯಲ್ಲಿ ಮಾತ್ರ ಲಭ್ಯವಿದೆ.

ಫೋಟೊ, ವಿಡಿಯೊ ತುಣುಕನ್ನು ಸಹ ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ದೂರು ದಾಖಲಾದ ನಂತರ ದೂರುದಾರರಿಗೆ ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಅದರ ಮೂಲಕ ಮುಂದಿನ ಪ್ರಕ್ರಿಯೆಯನ್ನು ಅವರು ಟ್ರ್ಯಾಕ್ ಮಾಡಬಹುದಾಗಿದೆ. ದೂರು ನೀಡಿದವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಆ್ಯಪ್: VIGIL-South Western Railway

ರೈಲು ಬೋಗಿ ಸ್ವಚ್ಛತೆಗೆ ಕ್ಲೀನ್ ಮೈ ಕೋಚ್ ಆ್ಯಪ್...

ಬೋಗಿಗಳ ಸ್ವಚ್ಛತೆಗಾಗಿ ’ಕೋಚ್ ಮಿತ್ರಾ ಮತ್ತುಕ್ಲೀನ್ ಮೈ ಕೋಚ್ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ.ಮೂಗು ಮುಚ್ಚಿಕೊಂಡು ಪ್ರಯಾಣ ಮಾಡುವುದನ್ನು ಮುಕ್ತಿಗೊಳಿಸಿ ದೂರ ಪ್ರಯಾಣದ ಅನುಭವ ಹಿತಕರವಾಗುವಂತೆಮಾಡುವುದು ಈಆ್ಯಪ್‌ನ ಮುಖ್ಯ ಉದ್ದೇಶವಾಗಿದೆ.

ಈ ಆ್ಯಪ್ ಮೂಲಕ ದೂರು ಸಲ್ಲಿಸಿದ 15 ನಿಮಿಷಗಳಲ್ಲಿ ರೈಲ್ವೆ ಸಿಬ್ಬಂದಿಗಳು ಬೋಗಿ ಮತ್ತು ಶೌಚಾಲಯವನ್ನು ಶುಚಿಗೊಳಿಸಲಿದ್ದಾರೆ. ರೈಲು ಬೋಗಿಗಳು ಮಾತ್ರವಲ್ಲದೆ ಎ,ಬಿ,ಸಿ ದರ್ಜೆಯ ನಿಲ್ದಾಣಗಳನ್ನೂ ಸ್ವಚ್ಛಗೊಳಿಸಲಾಗುತ್ತದೆ. ಆ್ಯಪ್ ಮೂಲಕ ಮಾತ್ರವಲ್ಲದೆ ಎಸ್‌ಎಂಎಸ್ ಮೂಲಕವು ದೂರು ನೀಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿಲಭ್ಯವಿರುವ ’ಕೋಚ್ ಮಿತ್ರಾ ಮತ್ತು ಕ್ಲೀನ್ ಮೈ ಕೋಚ್’ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪಿಎನ್‌ಆರ್ ನಂಬರ್ ನಮೂದಿಸಿ ದೂರ ಸಲ್ಲಿಸಬೇಕು.

ಆ್ಯಪ್:Clean My Coach' app

ಐಆರ್‌ಸಿಟಿಸಿ ರೈಲ್ ಆ್ಯಪ್..

ರೈಲ್ವೆ ಇಲಾಖೆಯು ಟಿಕೆಟ್ ಬುಕ್ಕಿಂಗ್ ಮಾಡಲು ಐಆರ್‌ಟಿಸಿ ಆ್ಯಂಡ್ರಾಯಿಡ್ ಆ್ಯಪ್ ಅನ್ನು ವಿನ್ಯಾಸ ಮಾಡಿದೆ. 2014ರಲ್ಲಿ ರೂಪಿಸಿದ್ದ ಈ ಆ್ಯಪ್ ಅನ್ನು ಕಾಲ ಕಾಲಕ್ಕೆ ಅಪ್‌ಡೇಟ್ ಮಾಡಲಾಗಿದೆ.ಗೂಗಲ್ ಪ್ಲೇಸ್ಟೋರ್‌ನಲ್ಲಿ ‘ಐಆರ್‌ಸಿಟಿಸಿ ಕನೆಕ್ಟ್’ ಹೆಸರಿನ ಅಧಿಕೃತ ಆ್ಯಪ್ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಮಾದರಿಯಲ್ಲಿ ದೊರೆಯಲಿದೆ.

ಪಿಎನ್‌ಆರ್ ಸಂಖ್ಯೆ ಮಾಹಿತಿ, ವೇಳಾಪಟ್ಟಿ, ಟಿಕೆಟ್ ಬುಕ್ಕಿಂಗ್, ಇ–ಕೆಟರಿಂಗ್, ರೈಲು ತಲುಪುವ ಸಮಯ ಸೇರಿದಂತೆ ಪ್ರಯಾಣದ ಮಾಹಿತಿ ಇದರಲ್ಲಿ ಸಿಗಲಿದೆ.

ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಈಗಾಗಲೇ ಖಾತೆ ಹೊಂದಿರುವ ಬಳಕೆದಾರರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ದಾಖಲಿಸಿ ಬಳಕೆ ಮಾಡಬಹುದು.

ಆ್ಯಪ್:IRCTC Rail Connect

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.