ಕಲಾಯಿಕುಂಡ, ಪಶ್ಚಿಮಬಂಗಾಳ: ಭಾರತೀಯ ವಾಯುಪಡೆ ಮತ್ತು ಅಮೆರಿಕ ಮಿಲಿಟರಿ ಯುದ್ಧ ವಿಮಾನಗಳು ಪಶ್ಚಿಮಬಂಗಾಳದ ಮೇದಿನಿಪುರ ಜಿಲ್ಲೆಯ ಕಲಾಯಿಕುಂಡ ವಾಯು ನೆಲೆಯಲ್ಲಿ ಜಂಟಿ ಸಮಾರಭ್ಯಾಸ ನಡೆಸಿದವು.

ಜಂಟಿ ಸಮಾರಭ್ಯಾಸವು ‘ಕೋಪ್ ಇಂಡಿಯಾ 2023 ತಾಲೀಮು’ ಭಾಗವಾಗಿದ್ದು, ಎರಡೂ ಸೇನಾ ಪಡೆಗಳ ಅತ್ಯಾಧುನಿಕ ಯುದ್ಧ ವಿಮಾನಗಳು ವಾಯುಪಡೆಯ ಇಲ್ಲಿನ ಸೇನಾ ನೆಲೆಯಿಂದ ಅನುಕ್ರಮವಾಗಿ ಹಾರಾಟ ನಡೆಸಿದವು. ಏಪ್ರಿಲ್ 10ರಿಂದ ಆರಂಭವಾಗಿದ್ದ ಈ ತಾಲೀಮು ಸೋಮವಾರ ಕೊನೆಗೊಂಡಿತು.

ಅಮೆರಿಕದ ಎಫ್ 15 ಯುದ್ಧ ವಿಮಾನದ ಜತೆಗೆ ಭಾರತೀಯ ವಾಯುಪಡೆಯ ತೇಜಸ್, ರಾಫೆಲ್, ಸುಕೊಯ್ –30, ಜಾಗ್ವಾರ್ ಯುದ್ಧ ವಿಮಾನಗಳು ಈ ತಾಲೀಮಿನಲ್ಲಿ ಭಾಗವಹಿಸಿದ್ದವು.

ಇದೇ ವೇಳೆ ಪಶ್ಚಿಮ ಬರ್ಧಮಾನ್ ಜಿಲ್ಲೆಯಲ್ಲಿನ ಪನಾಗರ್ ವಾಯು ನೆಲೆಯಲ್ಲಿ ಏಪ್ರಿಲ್ 10ರಿಂದ 12 ದಿನಗಳ ಕಾಲ ಸೇನಾ ಸರಕು ಸಾಗಣೆಯ ವಿಮಾನಗಳ ತಾಲೀಮು ಕೂಡ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.