ಪೊಲೀಸರು ದೂರು ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿರುವುದು ಖಂಡನೀಯ ಮತ್ತು ನಾಚಿಕೆಗೇಡಿನ ವಿಚಾರ. ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದರೆ ಪ್ರಮುಖ ಸಾಕ್ಷ್ಯಗಳು ಕೈತಪ್ಪಿ ಹೋಗುವ ಅಪಾಯವಿರುತ್ತದೆ. ಇಂಥ ಸೂಕ್ಷ್ಮ ವಿಚಾರದ ಕುರಿತು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಖಂಡಿತವಾಗಿಯೂ ತನಿಖೆ ನಡೆಯಬೇಕು
ಉಜ್ವಲ್ ನಿಕಮ್ ಪ್ರಕರಣ ಸಂಬಂಧ ಸರ್ಕಾರ ನೇಮಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್
ಘಟನೆ ನಡೆದ ತಕ್ಷಣವೇ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದರೆ ಪ್ರತಿಭಟನೆಯೇ ಆಗುತ್ತಿರಲಿಲ್ಲ. ಮಹಿಳೆಯರ ಸುರಕ್ಷತೆಯ ಕುರಿತು ಸರ್ಕಾರ ಗಂಭೀರವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮುಂಬೈಗಿಂತ ಹೆಚ್ಚಾಗಿ ದೆಹಲಿಯಲ್ಲಿಯೇ ಸಮಯ ಕಳೆಯುತ್ತಾರೆ. ಘಟನೆ ಕುರಿತು ಅವರು ಸ್ಪಷ್ಟೀಕರಣ ನೀಡಬೇಕು ಮತ್ತು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು
ಸುಪ್ರಿಯಾ ಸುಳೆ ಎನ್‌ಸಿಪಿ (ಶರದ್ ಬಣ) ಸಂಸದೆ
ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿತ್ತು. ಅವರು ಯಾರೂ ಸ್ಥಳೀಯರಲ್ಲ. ಪ್ರತಿಭಟನಕಾರರ ಬೇಡಿಕೆಗಳಿಗೆ ಸರ್ಕಾರ ಸಮ್ಮತಿ ಸೂಚಿಸಿದ ಮೇಲೆಯೂ ಪ್ರತಿಭಟನೆಯನ್ನು ಮುಂದುವರಿಸಲಾಯಿತು. ಅಂದರೆ ಅವರು ಸಾರ್ವಜನಿಕರಾಗಿರಲಿಲ್ಲ ಎಂದರ್ಥ. ಕೆಲವರು ನಮ್ಮ ಸರ್ಕಾರದ ‘ಲಾಡ್ಲಿ ಬೆಹನಾ ಯೋಜನೆ’ ಹೆಸರು ಬರೆದಿದ್ದ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು. ರೈಲು ತಡೆ ನಡೆಸಿ ಯಾರಾದರೂ ಪ್ರತಿಭಟನೆ ನಡೆಸುತ್ತಾರೆಯೇ? ನಮ್ಮ ಲಾಡ್ಲಿ ಬೆಹನಾ ಯೋಜನೆ ಕುರಿತು ವಿರೋಧ ಪಕ್ಷಗಳಿಗೆ ಇರುವ ಹೊಟ್ಟೆ ಕಿಚ್ಚು ಪ್ರತಿಭಟನೆಯಲ್ಲಿ ಕಾಣಿಸುತ್ತಿತ್ತು