ಜೆರುಸಲೆಂ: 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಶನಿವಾರ ಇಸ್ರೇಲ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಗ್ಗೊಲೆಯ ರೂವಾರಿಪಾಕಿಸ್ತಾನ ಮೂಲದ ಉಗ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇಲ್ಲಿನ ಜನರು ಒತ್ತಾಯಿಸಿದರು.

ಶುಕ್ರವಾರ ಸಂಜೆಯಿಂದಲೇ ಇಸ್ರೇಲ್‌ನಲ್ಲಿರುವ ಭಾರತೀಯರು ಬ್ಯಾನರ್‌ಗಳನ್ನು ಹಿಡಿದು, ದೀಪವನ್ನು ಹಚ್ಚಿ ಉಗ್ರರ ದಾಳಿಯನ್ನು ಖಂಡಿಸಿದರು. ದಾಳಿಯ ರೂವಾರಿ ಪಾಕಿಸ್ತಾನ ಪ್ರಾಯೋಜಿತ ಲಷ್ಕರ್–ಎ–ತೊಯಬಾ ಸಂಘಟನೆಯ ಉಗ್ರನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿಭಾರತೀಯ ಸೇನೆಯ ಹೋರಾಟ ಮತ್ತು ಸೈನಿಕರತ್ಯಾಗವನ್ನು ಸ್ಮರಿಸಿದರು.

2008ರ ನವೆಂಬರ್ 26ರಂದು ಪಾಕಿಸ್ತಾನ ಮೂಲದ 10 ಉಗ್ರರು ಜಲಮಾರ್ಗದಿಂದ ಮುಂಬೈ ತಲುಪಿ ನಾಗರಿಕ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 16 ಭದ್ರತಾ ಸಿಬ್ಬಂದಿ, 26 ವಿದೇಶಿಯರು ಸೇರಿ ಒಟ್ಟು 166 ಜನರು ಸಾವಿಗೀಡಾಗಿದ್ದರು, 300 ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.