ಶ್ರೀನಗರ: ಬಾಲಕರು ಚಲಾಯಿಸುತ್ತಿದ್ದ ಕಾರು ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ವಿಭಜಕಕ್ಕೆ ಅಪ್ಪಳಿಸಿದ ಪರಿಣಾಮ ಇಬ್ಬರು ಬಾಲಕರು ಮೃತಪಟ್ಟು, ಮತ್ತಿಬ್ಬರು ಬಾಲಕರು ಗಾಯಗೊಂಡಿದ್ದಾರೆ.

ಶ್ರೀನಗರ–ಬಾರಾಮುಲ್ಲಾ ಹೆದ್ದಾರಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಬಾಲಕರು ಚಲಾಯಿಸುತ್ತಿದ್ದ ಎಸ್ಯುವಿ ಕಾರು ಅಪಘಾತಕ್ಕೀಡಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 17 ವರ್ಷದ ಹಮಾದ್ ಮತ್ತು ಅಸೀಮ್ ಸೋಫಿ ಮೃತಪಟ್ಟವರು. ಗಾಯಗೊಂಡ ಇಬ್ಬರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

‘ನಮ್ಮ ರಸ್ತೆ ಸುರಕ್ಷತಾ ಪಾಲನೆ ಜ್ಞಾನ ಸುಧಾರಿಸುತ್ತಿಲ್ಲ ಎಂಬುದು ಈ ಘಟನೆಯಿಂದ ವ್ಯಕ್ತವಾಗುತ್ತಿದೆ. ಸಂಚಾರ ನಿಯಮಗಳು ನಮ್ಮ ಸುರಕ್ಷತೆಗೆ ಇವೆ,’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ನಲ್ಲಿ ತಿಳಿಸಿದ್ದಾರೆ.

ಪೋಷಕರು ಬಾಲಕರಿಗೆ ವಾಹನಗಳನ್ನು ನೀಡದಂತೆ ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕ (ಸಂಚಾರ) ಮುಜಾಫರ್ ಶಾ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.