PHOTOS: ಮೈ ಜುಮ್ಮೆನಿಸುವ ತಮಿಳುನಾಡಿನ ಗ್ರಾಮೀಣ ಕ್ರೀಡೆ ‘ಜಲ್ಲಿಕಟ್ಟು’
ಚೆನ್ನೈ: ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ಇಂದು (ಶುಕ್ರವಾರ) ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಂಕ್ರಾಂತಿ ಹಬ್ಬದ ದಿನದಂದು ಆರಂಭವಾಗುವ ಈ ಆಚರಣೆ ತಮಿಳುನಾಡಿನಲ್ಲಿ ಒಂದು ತಿಂಗಳವರೆಗೆ ನಡೆಯಲಿದೆ.ತಮಿಳರು ಪೊಂಗಲ್ ಎಂದು ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ‘ಕೋಲಮ್’ಗಳು ಈ ಹಬ್ಬದ ಆಕರ್ಷಣೆ. ಹೊಸದಾಗಿ ಬೆಳೆದ ಭತ್ತದಿಂದ ತೆಗೆದ ಅಕ್ಕಿಕಾಳುಗಳನ್ನು ಹಾಕಿ, ಹೆಸರುಬೇಳೆ ಬೆರೆಸಿ ಪೊಂಗಲ್ ಮಾಡುತ್ತಾರೆ. ಈ ಹಬ್ಬದ ಅಂಗವಾಗಿ ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಯೂ ವಿಜೃಂಭಣೆಯಿಂದ ನಡೆಯುತ್ತದೆ.