ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ನಡೆದಿದ್ದು, ಮತದಾರರು ಉಲ್ಲಾಸ, ಉತ್ಸಾಹದಿಂದ ಮತ ಚಲಾಯಿಸಿದರು. ರಾತ್ರಿ 11.30ರ ಮಾಹಿತಿ ಪ್ರಕಾರ ಶೇ 61ರಷ್ಟು ಮತದಾನ ನಡೆದಿದೆ.

ಇದು ಹಿಂದಿನ ಏಳು ಚುನಾವಣೆಗಳಲ್ಲಿ (ನಾಲ್ಕು ಲೋಕಸಭಾ ಮತ್ತು ಮೂರು ವಿಧಾನಸಭಾ ಚುನಾವಣೆ) ನಡೆದ ಮತದಾನಕ್ಕಿಂತ ಹೆಚ್ಚು ಎಂದು ಮುಖ್ಯ ಚುನಾವಣಾ ಅಧಿಕಾರಿ ಪಿ.ಕೆ.ಪೋಲೆ ತಿಳಿಸಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತಗಟ್ಟೆಗಳ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ಮುಕ್ತಾಯ ವಾಯಿತು. ಎಲ್ಲೂ ಮರು ಮತದಾನ ನಡೆಸುವ ಅಗತ್ಯವಿಲ್ಲ ಎಂದರು.

2014ರ ಬಳಿಕ ಇಲ್ಲಿನ ವಿಧಾನಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ಜನರು ಮತಗಟ್ಟೆಗಳ ಬಳಿ ಸರತಿಯಲ್ಲಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಪುರುಷರು, ಮಹಿಳೆಯರು, ಯುವ ಮತ್ತು ಹಿರಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಕಣದಲ್ಲಿದ್ದ 219 ಅಭ್ಯರ್ಥಿಗಳು: ವಿಧಾನಸಭೆಯ 90 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 7 ಜಿಲ್ಲೆಗಳ 24 ಕ್ಷೇತ್ರಗಳಿಗೆ ಮತದಾನ ನಿಗದಿಯಾಗಿತ್ತು. ಇದರಲ್ಲಿ ಕಾಶ್ಮೀರ ಕಣಿವೆ ಪ್ರದೇಶದ 16 ಮತ್ತು ಜಮ್ಮು ಪ್ರದೇಶದ 8 ಕ್ಷೇತ್ರಗಳಿಗೆ ಮತದಾನ ನಡೆಯಿತು. 90 ಪಕ್ಷೇತರ ಅಭ್ಯರ್ಥಿಗಳು, 9 ಮಹಿಳೆಯರು ಸೇರಿದಂತೆ 219 ಅಭ್ಯರ್ಥಿಗಳು ಕಣದಲ್ಲಿದ್ದರು.

ಬಿಜಬೆಹಾರ ಮತ್ತು ಡಿ.ಎಚ್.ಪೋರಾಗಳಲ್ಲಿ ಕೆಲ ಸಣ್ಣ ಪುಟ್ಟ ಘರ್ಷಣೆ ಹೊರತುಪಡಿಸಿದರೆ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತು.

ಕಣಿವೆ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್‌ನಲ್ಲಿ ಹಿಂಪಡೆದು, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಆದಾದ ಬಳಿಕ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಮೂವರು ಬಿಜೆಪಿ ನಾಯಕರ ಅಮಾನತು

ಜಮ್ಮು: ಪಕ್ಷದ ವಿರುದ್ಧ ಬಂಡಾಯವೆದ್ದು ಅಭ್ಯರ್ಥಿಯಾಗಿ ಕಣಕ್ಕಿಳಿದ ಮೂವರು ಹಿರಿಯ ನಾಯಕರನ್ನು ಬಿಜೆಪಿ ಬುಧವಾರ ಅಮಾನತುಗೊಳಿಸಿದೆ.

ಜಮ್ಮು ಮತ್ತು ಕಾಶ್ಮೀರ ಘಟಕದ ಉಪಾಧ್ಯಕ್ಷ ಪವನ್ ಖಜುರಿಯಾ, ಹಿರಿಯ ನಾಯಕರಾದ ಬಲ್ವಾನ್ ಸಿಂಗ್ ಮತ್ತು ನರೀಂದರ್ ಸಿಂಗ್ ಭಾವು ಅವರು ಅಮಾನತುಗೊಂಡ ನಾಯಕರಾಗಿದ್ದಾರೆ.

ಬಹಿಷ್ಕಾರ ಕೊನೆಗಾಣಿಸಿದ ಮತದಾರರು

ಕುಲ್ಗಾಂ: ದೀರ್ಘಕಾಲದಿಂದ ಚುನಾವಣೆಯನ್ನು ಬಹಿಷ್ಕರಿಸಿದ್ದ ದಕ್ಷಿಣ ಕಾಶ್ಮೀರ ಜಿಲ್ಲೆಯ ಬುಗಾಮ್ ಪ್ರದೇಶದ ಜನರು, ಬಹಿಷ್ಕಾರವನ್ನು ಕೊನೆಗಾಣಿಸಿ ಈ ಬಾರಿ ಮತ ಚಲಾಯಿಸಿದರು.

ನಿಷೇಧಿತ ಜಮಾತ್-ಎ-ಇಸ್ಲಾಮಿ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಗಳ ಜತೆಗಿನ ಸಂಬಂಧದಿಂದ ಈ ಪ್ರದೇಶ ಕುಖ್ಯಾತವಾಗಿದೆ.

ಇಲ್ಲಿನ ಕುಲ್ಗಾಂ ಕ್ಷೇತ್ರದಲ್ಲಿ ಜಮಾತ್ ಬೆಂಬಲಿತ ಅಭ್ಯರ್ಥಿ ಅಹ್ಮದ್ ರೇಶಿ ಪರ ದೊಡ್ಡ ರ್‍ಯಾಲಿ ಇಲ್ಲಿ ಆಯೋಜನೆಗೊಂಡಿತ್ತು.

ಈ ಹಿಂದೆ ರೇಶಿ ಹಾಗೂ ಜಮಾತ್‌ನ ಮಾಜಿ ಮುಖ್ಯಸ್ಥ ಶೇಖ್ ಗುಲಾಂ ಹಸನ್ ಅವರು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಇವರಿಬ್ಬರ ಮನೆಗಳ ಮೇಲೆ ದಾಳಿ ನಡೆಸಿತ್ತು.

1989ರ ಸಶಸ್ತ್ರ ಸಂಘರ್ಷದ ಬಳಿಕ ಬುಗಾಮ್ ಮತ್ತು ಸುತ್ತಮುತ್ತಲಿನ ನಿವಾಸಿಗಳು ಚುನಾವಣೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಅದಾಗ್ಯೂ ಜಮಾತ್ ಬೆಂಬಲಿಗರು ಚುನಾವಣೆಯಲ್ಲಿ ಸ್ಪರ್ಧಿಸಿರುವುದು, ಅನೇಕ ಮತದಾರರನ್ನು ಮತ ಚಲಾಯಿಸುವಂತೆ ಪ್ರೇರೇಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.