ರಾಂಚಿ: ಧನ್ಬಾದ್ ನ್ಯಾಯಾಧೀಶರ ಸಾವಿನ ಹಿಂದಿನ ಷಡ್ಯಂತ್ರ ಬಯಲಿಗೆ ಎಳೆಯಬೇಕು ಎಂದು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಸಿಬಿಐಗೆ ತಾಕೀತು ಮಾಡಿದೆ.

ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಈ ಸಾವಿನ ಹಿಂದೆ ದೊಡ್ಡ ಸಂಚು ಇದೆ ಎಂದು ಅಭಿಪ್ರಾಯಪಟ್ಟಿತು.

ಧನ್ಬಾದ್ನ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರು ಕಳೆದ ವರ್ಷ ಜುಲೈ ತಿಂಗಳಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.

ಆನ್ಲೈನ್ ಮೂಲಕ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಾ.ರವಿರಂಜನ್ ನೇತೃತ್ವದ ವಿಭಾಗೀಯ ಪೀಠವು, ‘ಮೊಬೈಲ್ ಫೋನ್ ಕಳ್ಳತನ ಅಥವಾ ಇನ್ನಾವುದೇ ಕಾರಣಗಳಿಗಾಗಿ ಈ ಕೊಲೆ ನಡೆದಿಲ್ಲ’ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಪ್ರಕರಣ ಸಂಬಂಧ ಬಂಧಿಸಿರುವ ಇಬ್ಬರು ಆರೋಪಿಗಳಿಗೆ ನಡೆಸಿದ ಮಂಪರು ಪರೀಕ್ಷೆ ವರದಿ ಹಾಜರುಪಡಿಸಬೇಕು ಎಂದೂ ಸೂಚಿಸಿತು. ವಿಚಾರಣೆಯನ್ನು ಜ. 21ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.