ಜಮ್ಮು: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೂರನೇ ಹಾಗೂ ಅಂತಿಮ ಹಂತದಲ್ಲಿ ಶೇ 69.65 ಮತದಾನವಾಗಿದೆ ಎಂದು ಚುನಾವಣಾ ಆಯೋಗ ಇಂದು (ಬುಧವಾರ) ತಿಳಿಸಿದೆ.

ಉಧಮ್‌ಪುರ ಜಿಲ್ಲೆಯಲ್ಲಿ ಗರಿಷ್ಠ ಶೇ 76.09ರಷ್ಟು ಮತದಾನವಾಗಿದ್ದು, ಸಾಂಬಾ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಕಥುವಾದಲ್ಲಿ ಶೇ 73.34. ಜಮ್ಮುವಿನಲ್ಲಿ ಶೇ 71.40, ಬಂಡಿಪೋರಾದಲ್ಲಿ ಶೇ 67.68, ಕುಪ್ವಾರದಲ್ಲಿ ಶೇ 66.79 ಮತ್ತು ಬಾರಾಮುಲ್ಲಾದಲ್ಲಿ ಶೇ 61.03ರಷ್ಟು ಮತದಾನವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟಾರೆ ಶೇ 63.45ರಷ್ಟು ಮತದಾನ...

ಒಟ್ಟಾರೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ಮೂರು ಹಂತಗಳಲ್ಲಿ ಶೇ 63.45ರಷ್ಟು ಮತದಾನವಾಗಿದೆ. ಇದು ಕಳೆದ ಲೋಕಸಭೆ ಚುನಾವಣೆಗಿಂತಲೂ ಅಧಿಕವಾಗಿದೆ ಎಂದು ಜಮ್ಮು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 18ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 61.38 ಮತ್ತು ಸೆಪ್ಟೆಂಬರ್ 25ರಂದು ಎರಡನೇ ಹಂತದಲ್ಲಿ ಶೇ 57.31ರಷ್ಟು ಮತದಾನವಾಗಿತ್ತು. ಅಕ್ಟೋಬರ್ 1ರಂದು ಕೊನೆಯ ಹಂತದ ಮತದಾನ ನಡೆದಿತ್ತು.

90 ಸದಸ್ಯ ಬಲದ ಜಮ್ಮು ವಿಧಾನಸಭೆ ಚುನಾವಣೆಯ ಫಲಿತಾಂಶ ಅಕ್ಟೋಬರ್ 8ರಂದು ಹೊರಬೀಳಲಿದೆ.
.ಜಮ್ಮು ಮತ್ತು ಕಾಶ್ಮೀರ | ಶೋಧ ಕಾರ್ಯಾಚರಣೆ ವಿಸ್ತರಿಸಿದ ಸೇನೆ.ಜಮ್ಮು-ಕಾಶ್ಮೀರ | ಕಥುವಾ: ಉಗ್ರನ ಹತ್ಯೆ, ರಜೌರಿಯಲ್ಲೂ ಎನ್ಕೌಂಟರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.