ನವದೆಹಲಿ: ಗುಲ್ಬರ್ಗ ರೈಲು ನಿಲ್ದಾಣದ ಹೆಸರನ್ನು ಕಲಬುರ್ಗಿ ರೈಲು ನಿಲ್ದಾಣ ಎಂದು ಬದಲಿಸುವ ಪ್ರಸ್ತಾವಕ್ಕೆ ಕೇಂದ್ರಸರ್ಕಾರ ಸೋಮವಾರ ಅನುಮೋದನೆ ನೀಡಿದೆ. ಇದರೊಂದಿಗೆ, ದೇಶದ ಹಲವು ಪಟ್ಟಣಗಳು ಮತ್ತು ರೈಲು ನಿಲ್ದಾಣಗಳ ಹೆಸರನ್ನು ಬದಲಿಸಲು ಸರ್ಕಾರ ಸಮ್ಮತಿ ನೀಡಿದೆ.

ಉತ್ತರಪ್ರದೇಶದ ಮೊಘಲ್ ಸರಾಯಿ ರೈಲು ನಿಲ್ದಾಣವನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್,ಉರಾಬರ್ಟ್ಸ್‌ಗಂಜ್ ನಿಲ್ದಾಣವನ್ನು ಸೋನ್‌ಭದ್ರಾ, ರಾಜಸ್ಥಾನದ ಇಸ್ಮಾಯಿಲ್‌ಪುರವನ್ನು ಪಿಚನ್ವಾ ಖುರ್ದ್, ಬಾರಮೇರ್‌ನ ಮಿಯೊನ್ ಕಾ ಬಾರಾ ನಿಲ್ದಾಣದ ಹೆಸರನ್ನು ಮಹೇಶ್‌ನಗರ ಎಂದು ಬದಲಿಸಲಾಗಿದೆ.

ಮಹಾರಾಷ್ಟ್ರದ ಸಾಂಗ್ಲಿಯ ಲಂಗ್ಡೇವಾಡಿಯನ್ನು ನರಸಿಂಹಗಾಂವ್, ಹರಿಯಾಣದ ಪಿಂಡಾರಿಯನ್ನು ಪಾಂಡುಪಿಂಡರ ಎಂದು ಬದಲಿಸಲು ಅನುಮೋದನೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.