ಥಾಣೆ: ಜನ್ಮದಿನವನ್ನು ಅನೇಕರು ಅದ್ಧೂರಿಯಾಗಿ ಮನೆಯಲ್ಲಿ, ಹೋಟೆಲ್, ರೆಸಾರ್ಟ್, ಪ್ರವಾಸಿ ಕೇಂದ್ರಗಳು, ದೇವಸ್ಥಾಗಳಲ್ಲಿ ಆಚರಿಸಿಕೊಳ್ಳುವುದನ್ನು ಕೇಳಿದ್ದೇವೆ, ನೋಡಿದ್ದೇವೆ.

ಆದರೆ, ವ್ಯಕ್ತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿಕೊಂಡು ಸುದ್ದಿಯಾಗಿದ್ದಾರೆ.

ಹೌದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ನಗರದಲ್ಲಿನ ಗೌತಮ್ ಮೋರೆ ಎನ್ನುವರು ತಮ್ಮ 54ನೇ ಹುಟ್ಟುಹಬ್ಬವನ್ನು ಕಲ್ಯಾಣದ ಸ್ಮಶಾನವೊಂದರಲ್ಲಿ ರಾತ್ರಿ 12 ಗಂಟೆಗೆ ಆಚರಿಸಿಕೊಂಡಿದ್ದಾರೆ.

ಸಮಾಜದಲ್ಲಿ ಸ್ಮಶಾನದ ಬಗ್ಗೆ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸ್ಮಶಾನದಲ್ಲಿ ಜನ್ಮದಿನವನ್ನು ಆಚರಿಸಿಕೊಂಡಿರುವುದಾಗಿ ಗೌತಮ್ ಮೋರೆ ತಿಳಿಸಿದ್ದಾರೆ. ಅವರ ಜನ್ಮದಿನದಲ್ಲಿ 100 ಕ್ಕೂ ಹೆಚ್ಚು ಜನ ಸ್ನೇಹಿತರು, ಹಿತೈಷಿಗಳು ಹಾಜರಿದ್ದಿದ್ದು ವಿಶೇಷವಾಗಿತ್ತು. ಮಕ್ಕಳು, ಮಹಿಳೆಯರೂ ಕೂಡ ಭಾಗವಹಿಸಿದ್ದರು. ಬಂದವರಿಗೆ ಕೇಕ್ ಜೊತೆ ಬಿರಿಯಾನಿಯನ್ನು ಕೂಡ ಊಟಕ್ಕೆ ನೀಡಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ

ಸ್ಮಶಾನ ಎಂಬುದು ಬಗ್ಗೆ ನಮ್ಮ ಸಮಾಜದಲ್ಲಿ ಅನೇಕ ಭಯಗಳಿವೆ, ಮೂಢನಂಬಿಕೆಗಳಿವೆ. ಇದು ಸರಿಯಲ್ಲ,ಸ್ಮಶಾನದ ಹೆಸರಿನಲ್ಲಿ ಮಾಟ–ಮಂತ್ರ ಮಾಡುವುದು, ಅನಾಚಾರ ಮಾಡುವುದು ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತದೆ ಎಂದು ಗೌತಮ್ ಹೇಳಿದ್ದಾರೆ.

ಪ್ರಗತಿಪರ ಚಿಂತಕರಾದ ದಿವಂಗತ ನರೇಂದ್ರ ದಾಬೋಲ್ಕರ್, ಸಿಂಧುತಾಯಿ ಸತ್ಪಾಲ್ ಅವರ ಪ್ರೇರಣೆ ನನಗೆ ಮೂಢನಂಬಿಕೆ ವಿರುದ್ಧ ಹೋರಾಟಕ್ಕ ಕಾರಣವಾಗಿದೆ ಎಂದು ಹೇಳಿದ್ದಾರೆ.

ಕುಕ್ಕರ್ ಸ್ಫೋಟ: ಎನ್ಐಎಗೆ ಶೀಘ್ರ ಹಸ್ತಾಂತರ -ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.