ಜಮ್ಮು: ಕಾಶ್ಮೀರಿ ಪಂಡಿತರ ಅನುಪಸ್ಥಿತಿಗೆ ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಂ ಸಮುದಾಯ ಒಂದು ದಿನ ವಿಷಾದಿಸಲಿದೆ. ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರತಿಪಾದಿಸಿದ್ದಾರೆ.

ಇಲ್ಲಿಯ ಗಾಂಧಿ ಮೆಮೋರಿಯಲ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಂಗ್, ‘ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರವು ಪೂರ್ಣವಾಗುವುದಿಲ್ಲ. ಅವರಿದ್ದ ಕಾರಣ ಕಾಶ್ಮೀರದಲ್ಲಿ ಸಂಸ್ಕೃತಿಯ ಉಳಿದಿದೆ. ಇತರ ಸಮುದಾಯಗಳೊಂದಿಗೆ ಸಾಮರಸ್ಯದಿಂದ ಬದುಕುವ ಮೂಲಕ ಪಂಡಿತರು ಕಣಿವೆ ರಾಜ್ಯದ ಪರಂಪರೆಯನ್ನು ಜೀವಂತವಾಗಿರಿಸಿದ್ದಾರೆ’ ಎಂದರು

‘ಒಂದು ಕಾಲದಲ್ಲಿ ಮಕ್ಕಳಿಗೆ ನೀಡುತ್ತಿದ್ದ ಮೌಲ್ಯಗಳು ಇಂದು ಮರೆಯಾಗುತ್ತಿವೆ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ, ಎರಡು ಅಥವಾ ಮೂರು ತಲೆಮಾರುಗಳ ಬಳಿಕ ಮರುಕಪಡುವ ಸ್ಥಿತಿ ಎದುರಾಗಲಿದೆ. ಪಂಡಿತರ ವಲಸೆಗೆ ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಂ ಸಮುದಾಯವು ವಿಷಾದಿಸುವ ದಿನ ಶೀಘ್ರವಾಗಿಯೇ ಬರಲಿದೆ. ಇದನ್ನು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತಿದ್ದೇನೆ’ ಎಂದು ಹೇಳಿದರು.

‘370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕಾರಾತ್ಮಕ ಬೆಳವಣಿಗೆಗಳಾಗಿವೆ. ಕಾಶ್ಮೀರಿ ಮುಸ್ಲಿಮರು ಸೇರಿದಂತೆ ಸಾಮಾನ್ಯ ಜನರೂ ಇದರ ಬಗ್ಗೆ ಸಂತೋಷಪಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.