ತಿರುವನಂತಪುರಂ: ಕೇರಳದ ಒಂದೇ ಊರಲ್ಲಿ ರಾಜಕೀಯ ಪ್ರೇರಿತ ಎರಡು ಕೊಲೆಗಳು ನಡೆದಿರುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಪಾಲಕ್ಕಾಡ್ ನಿವಾಸಿ, ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀನಿವಾಸನ್ (45) ಎಂಬುವವರನ್ನು ಗುಂಪೊಂದು ಶನಿವಾರ ಹತ್ಯೆ ಮಾಡಿದೆ.ಪಿಎಫ್‌ಐ ನಾಯಕ ಸುಬೇರ್ (43) ಎಂಬುವವರ ಹತ್ಯೆ ನಡೆದ 24 ಗಂಟೆಗಳ ಒಳಗಾಗಿ ಶ್ರೀನಿವಾಸನ್ ಕೊಲೆ ನಡೆದಿದೆ.

‘ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದರ ಹೊಣೆ ಹೊರಬೇಕು. ಕೂಡಲೇ ಕೇಂದ್ರ ಸರ್ಕಾರ ಕೇರಳದ ಕಾನೂನು ಸುವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ.

ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು, ‘ಪಾಲಕ್ಕಾಡ್ ಕೊಲೆಗಳ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಲಕ್ಕಾಡಿನಲ್ಲಿ ಮೇಲಿಂದ ಮೇಲೆ ಕೋಮು ದಳ್ಳುರಿಯ ಕೊಲೆಗಳು ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ರಾಜ್ಯ ಹೊತ್ತಿ ಉರಿಯುತ್ತಿದ್ದರೂ ಮುಖ್ಯಮಂತ್ರಿ ತಮ್ಮ ಸರ್ಕಾರದ ಒಂದನೇ ವರ್ಷಾಚರಣೆ ಸಂಭ್ರಮದಲ್ಲಿದ್ದಾರೆ. ತಿರುವನಂತಪುರದಿಂದ ಕಾಸರಗೋಡುವರೆಗೆ ಗೂಂಡಾಗಳ ಸಾಮ್ರಾಜ್ಯ ಆಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಕೂಡ ಪಾಲಕ್ಕಾಡ ಕೊಲೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಇದೇ ರೀತಿಯ ಎರಡು ಕೊಲೆಗಳು ಪಾಲಕ್ಕಾಡಿನಲ್ಲಿ ನಡೆದಿದ್ದವು ಎಂಬುದು ಇಲ್ಲಿ ಉಲ್ಲೇಖನಿಯ.

ಪಾಲಕ್ಕಾಡ್: ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.