ಕೊಚ್ಚಿ: ವೆಡ್ಡಿಂಗ್ ಫೋಟೊ ಶೂಟ್‌ಗಳಂತೆಯೇ ಪ್ರೀ ವೆಡ್ಡಿಂಗ್ (ಮದುವೆಗೂ ಮೊದಲ) ಫೋಟೊ ಶೂಟ್ ಕೂಡಈಗ ವಿವಾಹ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿವೆ. ಅದು ಯಾವ ಮಟ್ಟಕ್ಕೆ ಎಂದರೆ, ಈ ಜಮಾನದ ಟ್ರೆಂಡ್ ಎನ್ನುವಷ್ಟರ ಮಟ್ಟಿಗೆ.ಹೀಗೆಯೇ ಕೇರಳದಲ್ಲಿ ಪ್ರೀ ವೆಡ್ಡಿಂಗ್ ಫೋಟೊ ಶೂಟ್‌ನಲ್ಲಿ ತೊಡಗಿಕೊಂಡಿದ್ದ ಜೋಡಿ ಅವಿಸ್ಮರಣೀಯ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ. ಆ ವಿಡಿಯೋ ಈಗ ದೇಶಾದ್ಯಂತ ಭಾರಿ ವೈರಲ್ ಕೂಡ ಆಗಿದೆ.

ಫೋಟೋ ಶೂಟ್‌ಗೆ ಒಪ್ಪಂದ ಪಡೆದಿದ್ದ ‘ವೆಡ್‌ಪ್ಲಾನರ್’ ಎಂಬ ಫೋಟೊಗ್ರಫಿ ಸಂಸ್ಥೆಯೇ ಆ ಸನ್ನಿವೇಶದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದೆ.

ಟಿಜಿನ್ ಮತ್ತು ಶಿಲ್ಪಾ ಎಂಬ ಜೋಡಿ ವೆಡ್‌ಪ್ಲಾನರ್ ಸ್ಟುಡಿಯೊನೊಂದಿಗೆ ಮದುವೆ ಫೋಟೊ ಶೂಟ್ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಪಂಪಾ ನದಿ ತೀರದಲ್ಲಿ ಪ್ರೀ ವೆಡ್ಡಿಂಗ್ ಫೋಟೊ ಶೂಟ್ ಕೂಡ ನಡೆಯುತ್ತಿತ್ತು. ಜೋಡಿಯನ್ನು ಸಿಂಗರಿಸಿ, ದೋಣಿಯ ಮೇಲೆ ಕೂರಿಸಿ, ಮಳೆ ಬೀಳುತ್ತಿರುವಂಥಾ ಸನ್ನಿವೇಶವನ್ನು ಸೃಷ್ಟಿಸಿ ಚಿತ್ರ ಸೆರೆಹಿಡಿಯುತ್ತಿರುವಾಗಲೇ, ದೋಣಿಯು ಮೆಲ್ಲಗೇ ಪಕ್ಕಕ್ಕೆ ಉರುಳಿದಿದೆ. ಹೀಗಾಗಿ ದೋಣಿಯಲ್ಲಿ ಕುಳಿತಿದ್ದ ಜೋಡಿ ಅನಾಮತ್ತಾಗಿ ನೀರಿಗೆ ಬಿದ್ದಿದ್ದಾರೆ. ಕ್ಷಣಾರ್ಧದಲ್ಲಿ ಇಬ್ಬರೂ ಒದ್ದೆ ಮುದ್ದೆ.

ಇದೆಂಥಾ ಕೆಲಸವಾಯಿತು ಎಂದು ಗಂಡು ಹೆಣ್ಣು ಇಬ್ಬರೂ ನೀರಿನಿಂದ ಎದ್ದು ನಿಲ್ಲುತ್ತಾರೆ. ಸುತ್ತಲಿದ್ದವರು ಬಿದ್ದು ಬಿದ್ದು ನಗುತ್ತಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ. ವೆಡ್‌ಪ್ಲಾನರ್ ಸಂಸ್ಥೆ ಈ ವಿಡಿಯೋವನ್ನು ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಾಗಿನಿಂದ ಈ ವರೆಗೆ 8.30 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಇಲ್ಲೊಂದು ಟ್ವಿಸ್ಟ್ ಇದೆ. ಘಟನೆ ಕುರಿತು ಮಾತನಾಡಿರುವ ವೆಡ್‌ಪ್ಲಾನರ್ ಸ್ಟುಡಿಯೊ ವಕ್ತಾರ, ’ ದೋಣಿ ಉರುಳಿಸುವುದು ನಮ್ಮದೇ ಯೋಜನೆಯಾಗಿತ್ತು. ಆದರೆ, ಅದನ್ನು ನಾವು ಆ ಜೋಡಿಗೆ ಹೇಳಿರಲಿಲ್ಲ ಅಷ್ಟೇ,’ ಎಂದಿದ್ದಾರೆ. ಅಷ್ಟೇ ಅಲ್ಲ, ಆ ಜೋಡಿ ಈ ಘಟನೆಯನ್ನು ಆಸ್ವಾದಿಸಿದ್ದಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.