ಕೊಚ್ಚಿ: ಕೇರಳ ಚಿನ್ನ ಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಮತ್ತು ಇತರ ಸಹ ಆರೋಪಿಗಳ ಜಾಮೀನು ಅರ್ಜಿಯನ್ನು ಗುರುವಾರ ನ್ಯಾಯಾಲಯವು ವಜಾಗೊಳಿಸಿದೆ.

‘ಆರೋಪಿಗಳ ತ್ವರಿತ ಬಿಡುಗಡೆಯು, ಪ್ರಕರಣದ ತನಿಖೆಯ ಪ್ರಗತಿಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಆರೋಪಿಗಳು ಸಾಕ್ಷ್ಯಾಧಾರಗಳನ್ನು ಹಾಳು ಮಾಡುವ ಸಾಧ್ಯತೆ ಇದ್ದು, ಪರಾರಿಯಾಗುವ ಸಾಧ್ಯತೆಯೂ ಇದೆ’ ಎಂದು ಆರ್ಥಿಕ ಆಪರಾಧಗಳ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ.

‘ಪ್ರಕರಣ ಮೂರನೇ ಆರೋಪಿ ಸ್ವಪ್ನಾ ಸುರೇಶ್ ಪ್ರಭಾವಶಾಲಿ ಮಹಿಳೆಯಾಗಿದ್ದು, ಕಾನ್ಸುಲೇಟ್ ಕಚೇರಿಗೆ ರಾಜೀನಾಮೆ ನೀಡಿದ ನಂತರವೂ ಅವರು, ತಿರುವನಂತಪುರದಲ್ಲಿರುವ ಯುಎಇ ಕಾನ್ಸುಲೇಟ್ನಲ್ಲಿರುವ ಉನ್ನತ ಅಧಿಕಾರಿಗಳಿಗೆ ಸಹಾಯ ಮಾಡುವುದನ್ನು ಮುಂದುವರಿಸಿದ್ದರು’ ಎಂದು ನ್ಯಾಯಾಲಯವು ಹೇಳಿದೆ.

‘ರಾಜ್ಯ ಸರ್ಕಾರದ ಯೋಜನೆಯಲ್ಲಿ ಉದ್ಯೋಗವನ್ನು ಪಡೆಯುವಲ್ಲಿಯೂ ಸ್ವಪ್ನಾ ಸುರೇಶ್ ಯಶಸ್ವಿಯಾಗಿದ್ದಾರೆ. ಅಧಿಕಾರದ ವಲಯಗಳಲ್ಲಿ ಅವರು ತೀವ್ರ ಪ್ರಭಾವ ಹೊಂದಿದ್ದಾರೆ ಎಂಬುದು ಲಭ್ಯವಿರುವ ದಾಖಲೆಗಳಿಂದ ಸ್ಪಷ್ಟವಾಗಿದೆ. ಇಂತಹ ಮಹಿಳೆಗೆ ಸೆಕ್ಷನ್ 437 ಸಿಆರ್ಪಿಸಿ ನಿಂಬಂಧನೆಯ ಪ್ರಯೋಜನ ಪಡೆಯಲು ಅರ್ಹತೆ ಇಲ್ಲ’ ಎಂದೂ ನ್ಯಾಯಾಲಯವು ಸೂಚಿಸಿದೆ.

ಪ್ರಕರಣದ ತನಿಖೆಯ ಪ್ರಮುಖ ಭಾಗ ಪೂರ್ಣಗೊಂಡಿರುವುದರಿಂದ ತಮ್ಮ ಬಂಧನವನ್ನು ಮುಂದುವರಿಸಬಾರದು. ತಮಗೆ ಜಾಮೀನು ನೀಡಬೇಕೆಂದು ಕೋರಿ ಸ್ವಪ್ನಾ ಸುರೇಶ್ ಮತ್ತು ಮತ್ತೊಬ್ಬ ಆರೋಪಿ ಅಳವಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.