ತಿರುವನಂತಪುರಂ: ಪ್ರವಾಹ ಪೀಡಿತಕೇರಳಕ್ಕೆ ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಯುಎಇ ಹೇಳಿದೆ. ಆದರೆ,ಈ ವಿಷಯದಲ್ಲಿಯಾವುದೇ ಗೊಂದಲಗಳಿಲ್ಲ ಎಂದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತೊಮ್ಮೆ ನೆರವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯುಎಇ ನೆರವಿನ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಈ ವಿಚಾರ ಕೇವಲ ಇಬ್ಬರ ನಡುವೆ ಮಾತ್ರ ಚರ್ಚೆಯಾಗಿದೆ. ಯುಎಇ ಆಡಳಿಗಾರ( ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್) ನಮ್ಮ ಪ್ರಧಾನ ಮಂತ್ರಿಗಳಿಗೆ ಹೇಳಿದ್ದಾರೆ. ಈ ವಿಷಯವನ್ನು ಜಗತ್ತಿಗೂ ತಿಳಿಸಲಾಗಿದೆ. ನೆರವು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದು ನಮ್ಮ ದೇಶದ ಸಮಸ್ಯೆ. ಆದರೆ ನೆರವು ಪಡೆಯಲಾಗುತ್ತದೆ ಎಂದು ನಾನು ಈಗಲೂ ಭಾವಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಲುಲು ಗ್ರೂಪ್ ಉದ್ಯಮಿ ಕೇರಳದ ಎ.ಎ.ಯುಸೂಫ್ ಅಲಿ ಅವರು ಈದ್ ಶುಭಾಶಯ ತಿಳಿಸಲುನಹ್ಯಾನ್ ಅವರನ್ನು ಭೇಟಿ ಮಾಡಿದ್ದಾಗ, ಕೇರಳಕ್ಕೆ ನೆರವು ನೀಡುವ ಕುರಿತು ಪ್ರಧಾನಿಗಳೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ’ ಎಂದೂ ತಿಳಿಸಿದರು.

‘ಈ ವಿಚಾರವನ್ನು ಸಾರ್ವಜನಿಕರಿಗೆ ಪ್ರಕಟಿಸುವ ಕುರಿತುಯುಸೂಫ್ ಅವರನ್ನು ಕೇಳಿದಾಗ,ಯಾವುದೇ ಅಡ್ಡಿಯಿಲ್ಲ. ಪ್ರಕಟಿಸಬಹುದು ಎಂದರು’ ಎಂದು ಮಾಹಿತಿ ನೀಡಿದರು.

ಹೀಗಾಗಿಕೇರಳ ನೆರೆ ಪರಿಹಾರ ನಿಧಿಗೆ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ದೇಶ ₹ 700 ಕೋಟಿ ದೇಣಿಗೆ ನೀಡಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ತಿಳಿಸಿದ್ದರು.

ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ಯುಎಇ ರಾಯಭಾರಿ ಅಹ್ಮದ್ ಅಲ್ಬನ್ನಾ, ‘ಕೇರಳಕ್ಕೆ ಪ್ರವಾಹ ಪರಿಹಾರವಾಗಿ ದೇಣಿಗೆ ನೀಡುವುದಾಗಿ ನಾವು ಈವರೆಗೆ ಅಧಿಕೃತವಾಗಿ ಘೋಷಿಸಿಯೇ ಇಲ್ಲ. ಎಷ್ಟು ಹಣ ನೀಡಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಅಲ್ಲದೆ ಭಾರತ ಸರ್ಕಾರಕ್ಕೆ ಈ ಬಗ್ಗೆ ಯಾವ ಮಾಹಿತಿಯನ್ನೂ ನೀಡಿಲ್ಲ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.