ತಿರುವನಂತಪುರಂ: ಮೊಬೈಲ್ನಲ್ಲಿ ಕೊರಿಯನ್ ವಿಡಿಯೊ ಅಲ್ಬಂ ನೋಡುವ ಚಟ ಬೆಳೆಸಿಕೊಂಡಿದ್ದ ಕೇರಳದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ.

ತಿರುವನಂತಪುರದಲ್ಲಿ 16ರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದೇನೆ ಮತ್ತು ನನಗೆ ಗೆಳೆಯರು ಯಾರೂ ಇಲ್ಲ. ಅಲ್ಲದೆ, ಕೊರಿಯನ್ ಮ್ಯೂಸಿಕ್ ವಿಡಿಯೊಗಳನ್ನು ವಿಪರೀತವಾಗಿ ನೋಡುತ್ತಿದ್ದೇನೆ, ಅದರಿಂದ ಹೊರಬರಲಾಗುತ್ತಿಲ್ಲ ಎಂದು ಬರೆದಿರುವ ಡೆತ್ನೋಟ್ ಸಹಿತ ಬಾಲಕಿ ಶವ ಪತ್ತೆಯಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕಲ್ಲಂಬಳಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಓದಿನಲ್ಲಿ ಹಿಂದುಳಿದಿರುವುದು ಮತ್ತು ಕೊರಿಯನ್ ವಿಡಿಯೊ ನೋಡುವ ಚಟ ಬೆಳೆಸಿಕೊಂಡಿರುವುದರಿಂದ ಬಾಲಕಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಕ್ಕೆ ಪೂರಕವಾಗಿ ಬಾಲಕಿ ಬರೆದಿರುವ ಡೆತ್ನೋಟ್ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಹೈದರಾಬಾದ್ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಬಾಲಾರೋಪಿ ವಶಕ್ಕೆ

ಬಾಲಕಿ 10ನೇ ತರಗತಿಯವರೆಗೆ ಓದಿನಲ್ಲಿ ಮುಂದಿದ್ದಳು. 11ನೇ ತರಗತಿಗೆ ಪ್ರವೇಶಿಸಿದ ನಂತರ, ತಾಯಿಯ ಮೊಬೈಲ್ನಲ್ಲಿ ಯೂಟ್ಯೂಬ್ ಮೂಲಕ ಕೊರಿಯನ್ ವಿಡಿಯೊ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊ ಗೇಮ್ನಿಂದ ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿ ಎಂದ ಪೋಷಕರು: ಸಮೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.