ತಿರುವನಂತಪುರ: ಕೇರಳದಲ್ಲಿ ಅಧಿಕಾರದಲ್ಲಿರುವ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮೈತ್ರಿಕೂಟವು ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದೆ. ಮೈತ್ರಿಕೂಟದ ಪ್ರಮುಖ ಪಕ್ಷ ಸಿಪಿಐ(ಎಂ) 15 ಕ್ಷೇತ್ರಗಳಲ್ಲಿ ಹಾಗೂ ಸಿಪಿಐ 4 ಕಡೆ ಕಣಕ್ಕಿಳಿಯಲಿವೆ ಎಂದು ತಿಳಿಸಲಾಗಿದೆ.

140 ಸದಸ್ಯ ಬಲದ ಕೇರಳ ವಿಧಾನಸಭೆಗೆ 2021ರಲ್ಲಿ ನಡೆದ ಚುನಾವಣೆಯಲ್ಲಿ ಎಲ್‌ಡಿಎಫ್ ಮೈತ್ರಿಕೂಟ 98 ಸ್ಥಾನಗಳನ್ನು ಗೆದ್ದಿತ್ತು. ಈ ಪೈಕಿ ಸಿಪಿಐ(ಎಂ) 61 ಹಾಗೂ ಸಿಪಿಐ 17 ಕಡೆ ಜಯ ಸಾಧಿಸಿದ್ದವು.

ಎಲ್‌ಡಿಎಫ್ ಸಂಚಾಲಕ ಇ.ಪಿ.ಜಯರಾಜನ್ ಅವರು ಸೀಟು ಹಂಚಿಕೆ ಕುರಿತು ಮಾತನಾಡಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತೆಯನ್ನು ರಕ್ಷಿಸಲು ಸಂಸತ್ತಿನಲ್ಲಿ ಎಡ ಪಕ್ಷಗಳ ಇರುವಿಕೆಯನ್ನು ಬಲಪಡಿಸುವ ಅಗತ್ಯವಿದೆ ಎಂದಿದ್ದಾರೆ.

'ದೇಶದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ಸಂಸತ್ತಿನಲ್ಲಿ ಎಡ ಪಕ್ಷಗಳು ಬಲಿಷ್ಠವಾಗಿ ಉಳಿಯುವುದು ಅಗತ್ಯವಾಗಿದೆ. ಎಡ ಪಕ್ಷಗಳ ಪ್ರಭಾವ ಕ್ಷೀಣಿಸಿರುವುದು ಸದ್ಯ ಭಾರತೀಯ ರಾಜಕಾರಣದಿಂದ ಎದುರಾಗುತ್ತಿರುವ ಎಲ್ಲ ಸಮಸ್ಯೆಗಳ ಮೂಲವಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೈತ್ರಿಕೂಟವು ರಾಜ್ಯದಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲುವ ಸಲುವಾಗಿ, ಸಂಸತ್ ಚುನಾವಣೆಯ ರಾಜಕೀಯ ಪ್ರಾಮಖ್ಯತೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದೆ. ಸೀಟು ಹಂಚಿಕೆಯಾಗಿರುವುದರಿಂದ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸಿಕೊಳ್ಳಬಹುದಾಗಿದೆ ಎಂದೂ ಜಯರಾಜನ್ ಹೇಳಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿಪಿಐ(ಎಂ), ಈ ಬಾರಿ ಒಂದು ಕ್ಷೇತ್ರವನ್ನು ಕೆಸಿ(ಎಂ) ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಕೇರಳದಲ್ಲಿ ಒಟ್ಟು 20 ಲೋಕಸಭೆ ಕ್ಷೇತ್ರಗಳಿದ್ದು, 2019ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿತ್ತು. ಉಳಿದ ಐದರಲ್ಲಿ ತಲಾ ಎರಡು ಕಡೆ ಸಿಪಿಐ(ಎಂ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಗೆದ್ದಿದ್ದವು. ಒಂದು ಸ್ಥಾನ ಕೆಸಿ(ಎಂ) ಪಾಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.