ಕೋಲ್ಕತ್ತ: ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹಾಗೂ ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ವಿರುದ್ಧ ಮಾನಹಾನಿಕರ ಆರೋಪ ಹೊರಿಸಿದ್ದಕ್ಕೆ ನೋಟಿಸ್ ಪಡೆದಿರುವ ಕೋಲ್ಕತ್ತದ ವಕೀಲ ಶಂತನು ಸಿನ್ಹಾ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

ತಾವು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ಅನ್ನು ಹಿಂದಕ್ಕೆ ಪಡೆಯುತ್ತಿಲ್ಲ ಎಂದು ಶಂತನು ಸ್ಪಷ್ಟಪಡಿಸಿದ್ದಾರೆ. ಆದರೆ ಆ ಪೋಸ್ಟ್ನಿಂದಾಗಿ ಮಾಳವೀಯ ಅವರಿಗೆ ನೋವಾಗಿದ್ದರೆ, ‘ಪ್ರಾಮಾಣಿಕವಾಗಿ ಖೇದ ವ್ಯಕ್ತಪಡಿಸುವುದಾಗಿ’ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗೆ ಸಂಪರ್ಕಿಸಿದಾಗ ಶಂತನು ಅವರು, ‘ನಾನು ಕ್ಷಮೆ ಕೇಳುತ್ತಿಲ್ಲ; ಬದಲಿಗೆ, ತಪ್ಪು ತಿಳಿವಳಿಕೆಗಳನ್ನು ಸರಿಪಡಿಸುವ ಯತ್ನ ಮಾಡುತ್ತಿದ್ದೇನೆ’ ಎಂದರು.

‘ದೇಶದ ಅತ್ಯಂತ ಕೊಳಕಿನ ಹಾಗೂ ಭ್ರಷ್ಟ ಪಕ್ಷವಾಗಿರುವ ಕಾಂಗ್ರೆಸ್, ನನ್ನ ಫೇಸ್ಬುಕ್ ಖಾತೆಯಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟಿಸಿದ ಒಂದು ಪೋಸ್ಟ್ ಬಳಸಿಕೊಂಡು, ಅಮಿತ್ ಮಾಳವೀಯ ಮತ್ತು ಬಿಜೆಪಿ ಕುರಿತು ದ್ವೇಷದ ಅಭಿಯಾನ ನಡೆಸುತ್ತಿರುವುದು ನನಗೆ ಬಹಳ ಕಿರಿಕಿರಿ ಉಂಟುಮಾಡುತ್ತಿದೆ’ ಎಂದು ಶಂತನು ಅವರು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.

ಶಂತನು ಅವರು ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ದೂರಿ, ಮಾಳವೀಯ ಅವರು ತಮ್ಮ ವಕೀಲರ ಮೂಲಕ ಶಂತನು ಅವರಿಗೆ ನೋಟಿಸ್ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.