ಕೋಲ್ಕತ್ತ: ಹಿಜಾಬ್ ಧರಿಸಿ ಕಾಲೇಜಿಗೆ ಬರದಂತೆ ಸಂಸ್ಥೆಯ ಅಧಿಕಾರಿಗಳು ತಮಗೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿರುವ ಘಟನೆ ಕೋಲ್ಕತ್ತಾ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಖಾಸಗಿ ಕಾನೂನು ಕಾಲೇಜಿನಲ್ಲಿ ನಡೆದಿದೆ.

ಈ ವಿಚಾರ ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗುತ್ತಿದ್ದಂತೆ, ‘ಇದು ತಪ್ಪಾದ ಸಂವಹನದ ಪರಿಣಾಮವಾಗಿದೆ. ಶಿಕ್ಷಕಿ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡು ನಂತರ ಜೂನ್ 11 ರಂದು ತರಗತಿಗೆ ವಾಪಸ್ಸಾಗುತ್ತಾರೆ’ ಎಂದು ಸಂಸ್ಥೆ ಹೇಳಿದೆ.

ಕಳೆದ ಮೂರು ವರ್ಷಗಳಿಂದ ಎಲ್ಜೆಡಿ ಕಾನೂನು ಕಾಲೇಜಿನ ಶಿಕ್ಷಕಿಯಾಗಿ ಸಂಜಿದಾ ಖಾದರ್ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಅವರು ತಲೆಗೆ ಸ್ಕಾರ್ಪ್ ಧರಿಸುತ್ತಿದ್ದರು. ಮೇ 31ರ ನಂತರ ಕೆಲಸದ ಸ್ಥಳದಲ್ಲಿ ಹಿಜಾಬ್ ಧರಿಸಬೇಡಿ ಎಂದು ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದ್ದ ಅವರು, ಕಾಲೇಜು ಆಡಳಿತ ಮಂಡಳಿಯ ಆದೇಶವು ನನ್ನ ಮೌಲ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಜೂನ್ 5 ರಂದು ರಾಜೀನಾಮೆ ನೀಡಿದ್ದರು.

ಸಂಜೀದಾ ರಾಜೀನಾಮೆ ವಿಚಾರ ಸುದ್ದಿಯಾಗುತ್ತಿದ್ದಂತೆ ಆಡಳಿತ ಮಂಡಳಿಯೇ ಅವರನ್ನು ಸಂಪರ್ಕಿಸಿ, ತಲೆಯ ಮೇಲೆ ಸ್ಕಾರ್ಪ್ ಧರಿಸಲು ಯಾವುದೇ ಅಡ್ಡಿಯಿಲ್ಲ, ಮತ್ತೆ ಕಾಲೇಜಿಗೆ ಬರಬಹುದು ಎಂದಿದೆ ಎಂದು ಮೂಲಗಳು ತಿಳಿಸಿವೆ.

‘ಸಂಸ್ಥೆಯ ಕಚೇರಿಯಿಂದ ಇ –ಮೇಲ್ ಬಂದಿದೆ. ಯೋಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಆದರೆ ಜೂನ್ 11 ರಂದು ಕಾಲೇಜಿಗೆ ತೆರಳುತ್ತಿಲ್ಲ’ ಎಂದು ಸಂಜೀದಾ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.