ಪಟ್ನಾ: ಬಿಹಾರ ರಾಜ್ಯದಲ್ಲಿ ಹಿಂದಿ ಪ್ರಾಧ್ಯಾಪಕರೊಬ್ಬರುತಮ್ಮ 32 ತಿಂಗಳ ₹ 24 ಲಕ್ಷ ವೇತನವನ್ನು ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಿದ್ದಾರೆ. ಪ್ರಾಧ್ಯಾಪಕರ ಈ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಸ್ತುತ ದಿನಗಳಲ್ಲಿ ಭ್ರಷ್ಟಾಚಾರಮಾಡುವವರೇ ತುಂಬಿ ತುಳುಕುತ್ತಿದ್ದಾರೆ. ಪ್ರತಿ ದಿನ ಐಟಿ, ಇ.ಡಿ ದಾಳಿಗಳು ನಡೆಯುತ್ತಲೇ ಇರುತ್ತವೆ. ಇಂತಹ ಕಾಲಘಟ್ಟದಲ್ಲಿ ಪ್ರಾಧ್ಯಾಪಕಲಲನ್ಕುಮಾರ್ ಪ್ರಾಮಾಣಿಕತೆಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ.

ಓದಿ...ಕೆರೂರು: ಹಿಂದೂ–ಮುಸ್ಲಿಂ ಯುವಕರ ನಡುವೆ ಗಲಾಟೆ, ಮೂವರಿಗೆ ಚಾಕು ಇರಿತ

ಮುಜಾಫರ್ಪುರ್ ನಗರದ ನಿತೀಶ್ವರ್ ಕಾಲೇಜಿನಲ್ಲಿಲಲನ್ಕುಮಾರ್ ಹಿಂದಿ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ‘ನಮ್ಮ ಕಾಲೇಜಿನ ಹಿಂದಿ ವಿಭಾಗದಲ್ಲಿ 131 ವಿದ್ಯಾರ್ಥಿಗಳು ಇದ್ದರೂ ಅವರಲ್ಲಿ ಯಾರೊಬ್ಬರು ತರಗತಿಗೆ ಬರುತ್ತಿಲ್ಲ. ಹಾಗಾಗಿನಾನು ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.ಇಂತಹ ಸಂದರ್ಭದಲ್ಲಿ ಸಂಬಳ ಪಡೆಯುವುದು ನೈತಿಕತೆಯಲ್ಲ. ಈ ಹಿನ್ನೆಲೆಯಲ್ಲಿ ಸುಮಾರು ₹ 24 ಲಕ್ಷ ವೇತನವನ್ನುನಿತೀಶ್ವರ್ ಮಹಾವಿದ್ಯಾಲಯದಕುಲಪತಿಗಳಿಗೆ ವಾಪಸ್ ನೀಡಿದ್ದೇನೆ ಎಂದು ಲಲನ್ ಕುಮಾರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತರಗತಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ, ನನಗೆ ಬೇರೆ ಕಾಲೇಜಿಗೆ ವರ್ಗಾವಣೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದೆ. ಆದರೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ, 2019 ಸೆಪ್ಟೆಂಬರ್ ತಿಂಗಳಿಂದ 2022ರ ಮೇ ವರೆಗೆ (2 ವರ್ಷ 9 ತಿಂಗಳು) ಪಡೆದ ₹23,82,238 ವೇತನದ ಚೆಕ್ ಅನ್ನು ಕುಲಪತಿಗಳಿಗೆ ನೀಡಿದ್ದೇನೆ ಎಂದು ಲಲನ್ ಕುಮಾರ್ ಹೇಳಿದ್ದಾರೆ.

ತರಗತಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಕುಲಪತಿಗಳಿಗೆ ಹಲವು ಸಲ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಚರ್ಚೆಯಾಗುತ್ತಿದೆ. ಪ್ರಾಧ್ಯಾಪಕ ಲಲನ್ ಕುಮಾರ್ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಓದಿ...
ನೀವು NRI? ನೆಟ್ಟಿಗನಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾಉತ್ತರ ಏನಿತ್ತು?

ಕಾಳಿ ಮಾತೆ ನಂತರ ಶಿವ, ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುವ ಫೋಟೊ ಹಂಚಿಕೊಂಡ ಲೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.