ನವದೆಹಲಿ: ಆರ್‌ಜೆಡಿ ಪಕ್ಷದ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರನ್ನು ಬುಧವಾರ ರಾತ್ರಿ ದೆಹಲಿ ಏಮ್ಸ್‌ಗೆ ಏರ್‌ಲಿಫ್ಟ್ ಮಾಡಲಾಗಿದೆ.

ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಲಾಲು ಅವರನ್ನು ದೆಹಲಿ ಏಮ್ಸ್‌ಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದರು.

ಲಾಲು ಅವರ ಜತೆ ವೈದ್ಯರ ತಂಡ ಮತ್ತು ಹಿರಿಯ ಪುತ್ರಿ ಮಿಸಾ ಭಾರ್ತಿ ಕೂಡ ದೆಹಲಿಗೆ ತೆರಳಿದ್ದಾರೆ.

ಲಾಲು ಅವರ ಪತ್ನಿ ರಾಬ್ಡಿ ದೇವಿ ಮತ್ತು ಕಿರಿಯ ಪುತ್ರ ತೇಜಸ್ವಿ ಯಾದವ್ ದೆಹಲಿಗೆ ಮುಂಚಿತವಾಗಿ ತೆರಳಿ, ಆಸ್ಪತ್ರೆಯಲ್ಲಿನ ದಾಖಲಾತಿ ಮತ್ತಿತರ ಕೆಲಸಗಳನ್ನು ನೋಡಿಕೊಂಡರು.

ಸೋಮವಾರ ಮನೆಯಲ್ಲಿ ಜಾರಿ ಬಿದ್ದಿದ್ದ ಲಾಲು ಅವರ ಭುಜದ ಮೂಳೆ ಮುರಿದಿದ್ದು, ದೇಹದ ಮತ್ತೆರಡು ಕಡೆಗಳಲ್ಲಿ ಗಾಯಗಳಾಗಿವೆ. ಹೀಗಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ.

ಬುಧವಾರ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪಾಟ್ನಾದ ಆಸ್ಪತ್ರೆಗೆ ಭೇಟಿ ನೀಡಿ ಲಾಲು ಅವರ ಆರೋಗ್ಯ ವಿಚಾರಿಸಿದ್ದರು. ನಂತರ ದೆಹಲಿಗೆ ಕರೆದೊಯ್ಯಲು ಸೂಚಿಸಿದ್ದರು.

ವಿಮಾನಗಳಲ್ಲಿ ತಾಂತ್ರಿಕ ದೋಷ: ಸ್ಪೈಸ್ಜೆಟ್ಗೆ ಡಿಜಿಸಿಎ ನೋಟಿಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.