ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ದೂರು ಸಲ್ಲಿಸಲು ಇರುವ ಕಾಲಮಿತಿಯನ್ನು ತೆಗೆದುಹಾಕುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (ಡಬ್ಲ್ಯುಸಿಡಿ) ಇರಿಸಿದ್ದ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯ ಅನುಮೋದಿಸಿದೆ.

‘ಪ್ರಕರಣ ನಡೆದ 10–15 ವರ್ಷಗಳ ನಂತರವೂ ದೂರು ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಅ.3ರಂದು ಪತ್ರ ಬರೆದಿದ್ದೆ. ಇದಕ್ಕೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ’ ಎಂದುಸಚಿವೆ ಮೇನಕಾ ಗಾಂಧಿ ಅವರು ಮಂಗಳವಾರ ಈ ತಿಳಿಸಿದ್ದಾರೆ.

ಪ್ರಸ್ತುತ,ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) 468ನೇ ಸೆಕ್ಷನ್ ಅಡಿಯಲ್ಲಿ, ಮಕ್ಕಳ ಮೇಲಿನ ಶೋಷಣೆ ಕುರಿತ ದೂರನ್ನು ಪ್ರಕರಣ ನಡೆದ ಮೂರು ವರ್ಷಗಳ ಒಳಗಾಗಿ ದಾಖಲಿಸಬೇಕು. ಆದರೆ ಸಿಆರ್ಪಿಸಿ ಸೆಕ್ಷನ್ 473ರ ಅಡಿಯಲ್ಲಿ ‘ನ್ಯಾಯಾಂಗದ ಹಿತಾಸಕ್ತಿ’ ಅಥವಾ ‘ವಿಳಂಬಕ್ಕೆ ಸೂಕ್ತ ವಿವರಣೆ’ಇದ್ದಲ್ಲಿ,ಹಳೆಯ ಪ್ರಕರಣದಲ್ಲೂ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.